ಬೆಂಗಳೂರು: 37ದಿನಗಳ ಕಾಲ ನಿರಂತರವಾಗಿ ನಡೆಯುವ ಸಾಹಿತ್ಯ-ಸಾಂಸ್ಕೃತಿಕ ಉತ್ಸವ ಕಳೆದ ಏಳು ದಿನಗಳಿಂದ ತುಂಬಾ ವಿಜೃಂಭಣೆಯಿಂದ ಸಾಗಿ ಬಂದಿದೆ. ಪುಸ್ತಕ ಹಬ್ಬದ ಪ್ರಯುಕ್ತ; ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಂಟನೆಯ ದಿನ ಕೇಶವಶಿಲ್ಪ ಸಭಾಂಗಣದಲ್ಲಿ ಸೋಲದೇವನಹಳ್ಳಿ ಆಚಾರ್ಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳ ಕಲಾಪ್ರಸ್ತುತಿಯು ನಡೆಯಿತು. ನೃತ್ಯ-ಸಂಗೀತಗಳೊಂದಿಗೆ ಪ್ರೇಕ್ಷಕರ ಮನಸೊರೆಗೊಳಿಸಿದ ದೃಶ್ಯಗಳು…




























