ಕನ್ನಡ ಪುಸ್ತಕ ಹಬ್ಬವು ಅಕ್ಟೋಬರ್‌ 31ರಿಂದ ಆರಂಭವಾಗಿ, ಡಿಸೆಂಬರ್ 6ರವರೆಗೆ 37 ದಿನಗಳ ಕಾಲ ರಾಷ್ಟ್ರೋತ್ಥಾನದ ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು, ಇಲ್ಲಿ ನಡೆಯಲಿದೆ.

37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವದಲ್ಲಿ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಪುಸ್ತಕ ಪ್ರೇಮಿಗಳು ಶೇ. 10 ರಿಂದ ಶೇ. 50ರ ವರೆಗೂ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಕೊಳ್ಳಬಹುದಾಗಿದೆ. ಈ ಪುಸ್ತಕ ಹಬ್ಬದಲ್ಲಿ ಹೊಸ ಪುಸ್ತಕಗಳ ಲೋಕಾರ್ಪಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು, ಸಾಹಿತ್ಯ-ಸಂಸ್ಕೃತಿ ಸಂಬಂಧಿತ ಚರ್ಚೆ, ಸಂವಾದ, ಉಪನ್ಯಾಸಗಳನ್ನೂ ಆಯೋಜಿಸಲಾಗುತ್ತಿದೆ.

Scroll to Top