ರಾಷ್ಟ್ರೋತ್ಥಾನ ಸಾಹಿತ್ಯ

ಕನ್ನಡ ಪುಸ್ತಕ ಹಬ್ಬ 2025


ರಾಷ್ಟ್ರೋತ್ಥಾನ ಸಾಹಿತ್ಯವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ 5ನೇ
ಕನ್ನಡ ಪುಸ್ತಕ ಹಬ್ಬ 2025
ಆಯೋಜಿಸಿದೆ. ಒಂದು ತಿಂಗಳಿಗಿಂತಲೂ ಹೆಚ್ಚುಕಾಲ ನಡೆಯುವ ಈ ಸುಂದರ ಸಾಹಿತ್ಯ-ಸಂಸ್ಕೃತಿ ಹಬ್ಬಕ್ಕೆ ಎಲ್ಲರಿಗೂ ಸ್ವಾಗತ.
ಈ ಬಾರಿ ಕನ್ನಡ ಪುಸ್ತಕ ಹಬ್ಬದ (Kannada Pustaka Habba 2025 ) ವಿಶೇಷ ಏನು? ಆಕರ್ಷಣೆಗಳು ಏನಿರಲಿವೆ? ತಿಳಿಯೋಣ ಬನ್ನಿ.

ಹಬ್ಬಕ್ಕೆ ದಿನಗಣನೆ

ದಿನ
ಗಂಟೆ
ನಿಮಿಷ
ಸೆಕೆಂಡ್

5ನೇ ಕನ್ನಡ ಪುಸ್ತಕ ಹಬ್ಬಕ್ಕೆ ಸುಸ್ವಾಗತ

ಏನಿದು ಕನ್ನಡ ಪುಸ್ತಕ ಹಬ್ಬ?

ಬೆಂಗಳೂರಿನಲ್ಲಿ ರಾಜ್ಯೋತ್ಸವ ಸಮಯದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಪ್ರತಿವರ್ಷ ಆಯೋಜಿಸುವ ಪ್ರಮುಖ ಸಾಹಿತ್ಯ-ಸಂಸ್ಕೃತಿ ಹಬ್ಬ. ಪುಸ್ತಕ ಪ್ರದರ್ಶನ, ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸಗಳು ಮತ್ತು ಸ್ಪರ್ಧೆಗಳನ್ನು ಇದು ಒಳಗೊಂಡಿರುತ್ತದೆ.

ರಿಯಾಯಿತಿ ದರದಲ್ಲಿ ಖರೀದಿಸಿ

37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವದಲ್ಲಿ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಪುಸ್ತಕ ಪ್ರೇಮಿಗಳು ಶೇ. 10 ರಿಂದ ಶೇ. 50ರ ವರೆಗೂ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಕೊಳ್ಳಬಹುದು.

ಕನ್ನಡ ಪುಸ್ತಕ ಹಬ್ಬ 2025

ಕನ್ನಡ ಪುಸ್ತಕ ಹಬ್ಬ 2025 ಯಾವಾಗ?

ರಾಷ್ಟ್ರೋತ್ಥಾನ ಸಾಹಿತ್ಯ ನಡೆಸಿಕೊಡುವ 5ನೇ ವರ್ಷದ ಕನ್ನಡ ಪುಸ್ತಕ ಹಬ್ಬವು ಈ ವರ್ಷ ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ನಡೆಯಲಿದೆ. ಈ ಬಾರಿ ಒಟ್ಟು 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ, ಸಾಹಿತ್ಯ ಸಿಂಧು ಪ್ರಕಾಶನ ಮಾತ್ರವಲ್ಲದೆ ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ.

ಏನಿರಲಿದೆ ಪುಸ್ತಕ ಹಬ್ಬದಲ್ಲಿ?

37 ದಿನಗಳ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ ಮತ್ತು 50ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಶ್ರೀ ವಿದ್ಯಾಭೂಷಣರು, ಶ್ರೀಮತಿ ಸಂಗೀತಾ ಕಟ್ಟಿ, ಶ್ರೀ ಫೈಯಾಜ್ ಖಾನ್ ಸೇರಿ ಖ್ಯಾತನಾಮರ ಕಾರ್ಯಕ್ರಮಗಳು ಇರಲಿದೆ. ಶಾಲಾ, ಕಾಲೇಜು ಮಕ್ಕಳಿಗೆ ಸ್ಪರ್ಧೆಗಳು ಸೇರಿದಂತೆ ಹಲವು ಆಕರ್ಷಣೆಗಳು ಕಾರ್ಯಕ್ರಮದ ಭಾಗವಾಗಿವೆ.

ಕನ್ನಡ ಪುಸ್ತಕ ಹಬ್ಬ ನಡೆಯುವುದೆಲ್ಲಿ?

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ(Kannada Pustaka Habba 2025 ) ನಡೆಯಲಿದೆ. ಅಂದರೆ, ಚಾಮರಾಜಪೇಟೆ, ಬಸವನಗುಡಿಗೆ ಅತ್ಯಂತ ಸಮೀಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ವಿಳಾಸ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019

Scroll to Top