ಹಿಂದುತ್ವ, ಸನಾತನ ಧರ್ಮ, ಆರ್‌ಎಸ್‌ಎಸ್, ದೇಶಪ್ರೇಮ ಹೀಗೆ ನಮ್ಮ ಧರ್ಮ ಹಾಗೂ ದೇಶದ ಬಗ್ಗೆ ಅಭಿಮಾನ ಹೊಂದಿರುವವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಂಘದ ಪ್ರಚಾರಕರು ಬಗ್ಗೆ ಇನ್ನಷ್ಟು ವಿಸ್ಕೃತವಾಗಿ ತಿಳಿದುಕೊಳ್ಳಲು ಬಯಸುವವರು ತಪ್ಪದೇ ಓದಬೇಕಾದ 10 ಪುಸ್ತಕಗಳ ಬಗ್ಗೆ ಮಾಹಿತಿ ಇಲ್ಲಿದೆ.
ಆರ್‌ಎಸ್‌ಎಸ್ 100 – ಶತ ಪಥ ಸಂಚಲನ |ಶಿಕಾರಿಪುರ ಈಶ್ವರ ಭಟ್
“ಆರ್‌ಎಸ್‌ಎಸ್ 100 – ಶತ ಪಥ ಸಂಚಲನ” ಶಿಕಾರಿಪುರ ಈಶ್ವರ ಭಟ್ ಅವರ ಮಹತ್ತರ ಕೃತಿ.
ಈ ಪುಸ್ತಕವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಸ್ಥಾಪನೆಯಿಂದ ಇಂದಿನವರೆಗಿನ 100 ವರ್ಷದ ಪಯಣವನ್ನು ಸಮಗ್ರವಾಗಿ ಪರಿಚಯಿಸುತ್ತದೆ.
ಗಾನಮಾಲಾ | Ganamala Songs Collections of RSS
ಪುಸ್ತಕದ ಹೆಸರು: ಗಾನಮಾಲಾ
ಪ್ರಕಾಶಕರು: ಸಾಹಿತ್ಯ ಸಂಗಮ
ಅರ್ಚನಾ ಪುಸ್ತಕ ಸಂಪುಟದ 12 ಆವೃತ್ತಿಗಳಲ್ಲಿ ಪ್ರಕಟವಾದ ಎಲ್ಲಾ ಹಾಡುಗಳನ್ನು ಸೇರಿಸಿ ʼಗಾನಮಾಲಾʼ ಎಂಬ ಹೆಸರಿನ ಒಂದು ಬೃಹತ್ ಸಂಪುಟವನ್ನು ಹೊರತರಲಾಗಿದೆ. ಈ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ, ಉತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸುವ ಹಾಡುಗಳನ್ನಷ್ಟೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ 272 ಹಾಡುಗಳ ಸಂಗ್ರಹವಿದೆ.
ಸನಾತನ: ನಿತ್ಯ ನೂತನ | ದು. ಗು. ಲಕ್ಷ್ಮಣ್| Sanatana: Nitya Nootana – Insights into Sanatana Dharma by Du.Gu. Lakshmana (Kannada Book)
ಪುಸ್ತಕ: ಸನಾತನ ನಿತ್ಯ ನೂತನ
ಲೇಖಕರು: ದು.ಗು.ಲಕ್ಷ್ಮಣ
ಪ್ರಕಾಶಕರು: ಸಮೃದ್ಧ ಸಾಹಿತ್ಯ
ದು.ಗು. ಲಕ್ಷ್ಮಣ್ ಅವರು ಹೊಸದಿಗಂತ, ಅಜೇಯ, ನವಪರ್ವ, ಸುದರ್ಶನ, ಕಲಾದರ್ಶನ ಮೊದಲಾದ ಪತ್ರಿಕೆಗಳಿಗೆ ಹಾಗೂ ಇನ್ನಿತರ ಶಾಲಾ-ಕಾಲೇಜುಗಳ ವಾರ್ಷಿಕ ಸಂಚಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವನ್ನು ಒಗ್ಗೂಡಿಸಿ ಸನಾತನ ನಿತ್ಯನೂತನ ಎಂಬ ಕೃತಿಯನ್ನು ಹೊರ ತರಲಾಗಿದೆ.
Dr. Hedgewar The Epoch-Maker | H V Seshadri
ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು | Nirmalaya: Life and Legacy of N. Krishnappa
ಪುಸ್ತಕದ ಹೆಸರು: ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು
ಲೇಖಕರು: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ
ಕೃಷ್ಣಪ್ಪನವರ ಜೀವನಗಾಥೆ ಬರೆಯುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅವರು ತಮ್ಮ ಬಗ್ಗೆ ಹೇಳಿಕೊಂಡಿರುವುದಾಗಲೀ ಬರೆದುಕೊಂಡಿರುವುದಾಗಲೀ ಹೆಚ್ಚೇನೂ ಸಿಗುವುದಿಲ್ಲವಾದ್ದರಿಂದ ಅದು ಕಷ್ಟ. ಆದರೆ ಅಕ್ಷರಶಃ ಸಾವಿರಾರು ಜನರೊಂದಿಗೆ ವ್ಯಕ್ತಿಗತವಾಗಿ ಪರಿಚಯ ಮಾತ್ರವಲ್ಲ, ಅವರ ಬದುಕುಗಳಲ್ಲೂ ವಿಶಿಷ್ಟ ಪಾತ್ರ ವಹಿಸಿದ್ದರಿಂದಾಗಿ ಆ ಎಲ್ಲ ಜನರೇ ಜೀವನಕಥೆಗೆ ಬೇಕಾದ ಸಾಮಗ್ರಿ ಒದಗಿಸುತ್ತಾರಾದ್ದರಿಂದ ಅದು ಸುಲಭವೂ ಹೌದು.
ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
ಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
ಲೇಖಕರು: ಕೃಷ್ಣಪ್ರಸಾದ ಬದಿ
ಪ್ರಕಾಶಕರು: ಸಾಹಿತ್ಯ ಸಂಗಮ
ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು.
ಅಂತರಂಗ-ತರಂಗ | ಕಾ.ಶ್ರೀ. ನಾಗರಾಜ.
ಪುಸ್ತಕದ ಹೆಸರು: ಅಂತರಂಗ-ತರಂಗ
ಲೇಖಕರು: ಕಾ. ಶ್ರೀ. ನಾಗರಾಜ
ಪ್ರಕಾಶಕರು: ಶ್ರೀ ಹರಿಪ್ರಕಾಶ ಕೋಣೆಮನೆ
ಭಾರತದೇಶದಲ್ಲಿ ತುರ್ತು ಅವಶ್ಯವಾಗಿರುವ ಹಿಂದುಸಂಘಟನೆಯನ್ನು ಸಾಂಗಗೊಳಿಸಿದ ಸಂಸ್ಥೆಗಳ ಪೈಕಿ ಪ್ರಮುಖವಾದದ್ದು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’. ನಾಗಪುರ ನಿವಾಸಿ ಕೇಶವ ಬಲಿರಾಮ ಹೆಡಗೇವಾರ್ ಸ್ಥಾಪಿಸಿದ ಈ ಸಂಘಕ್ಕೀಗ 100ರ ಹರೆಯ. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದರಣೀಯ ಸರಸಂಘಚಾಲಕರ ಆಪ್ತನುಡಿಗಳನ್ನು ಸಂಗ್ರಹಿಸಿ ಅಂತರಂತ-ತರಂಗ ಎಂಬ ಶೀರ್ಷಿಕೆಯ ಪುಸ್ತಕ ಬರೆದಿದ್ದಾರೆ ಲೇಖಕ ಕಾ.ಶ್ರೀ. ನಾಗರಾಜ.
ಅಗ್ನಿಪರೀಕ್ಷೆ- ಆರ್‌ಎಸ್‌ಎಸ್ ಮೇಲಿನ ಮೊದಲ ನಿಷೇಧದ ವಿರುದ್ಧ ಹೋರಾಟದ ಯಶೋಗಾಥೆ
ಭೋಪಾಲದ ಅರ್ಚನಾ ಪ್ರಕಾಶನವು ಹಲವು ವರ್ಷಗಳ ಹಿಂದೆ-1993ರಲ್ಲಿ ಪ್ರಕಟಿಸಿದ್ದ 1948-49 ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದಿ ಗ್ರಂಥದ ಕನ್ನಡ ಆವೃತ್ತಿ ಇದು. ಕಾಲಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾಗಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದ ಯಶೋಗಾಥೆಯೇ ಈ ಗ್ರಂಥದ ವಸ್ತು. ಕನ್ನಡ ಓದುಗರ ಸಲುವಾಗಿ ಅದರ ಅನುವಾದಿತ ಆವೃತ್ತಿ ಬೇಕೆಂಬ ಬೇಡಿಕೆ ಬಹು ದೀರ್ಘಕಾಲದಿಂದಲೂ ಇತ್ತು. ಈ ಪುಸ್ತಕ ಅದನ್ನೀಗ ಪೂರೈಸುತ್ತಿದೆ. ಈ ಪುಸ್ತಕ ಖರೀದಿಸಲು ಲಿಂಕ್: https://sahityabooks.com/shop/others/agni-parikshe-kannada-book-the-success-story-of-the-struggle-against-the-first-rss-ban/























