ಬೆಂಗಳೂರು: ನಗರದ ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಂಭಾಂಗಣದಲ್ಲಿ ನಿನ್ನೆ ಪ್ರೊ. ಎಲ್ ವಿ ಶಾಂತಕುಮಾರಿ ಹಾಗೂ ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಕಾದಂಬರಿ ಸಾರ್ವಭೌಮ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅ.ನ.ಕೃ ಪ್ರತಿಷ್ಠಾನದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಹಿರಿಯ ಸಾಹಿತಿ ಡಾ|| ಎಸ್ ಆರ್ ರಾಮಸ್ವಾಮಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಶಶಿಕಿರಣ್ ಬಿ. ಎನ್ ಅಭಿನಂದನೆ ಸಲ್ಲಿಸಿದರು.





































