ಸಾಹಿತ್ಯ ವೇದಿಕೆಯಲ್ಲಿ ಅಷ್ಟಾವಧಾನದ ದೃಶ್ಯ :ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಬೆಂಗಳೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ 37ದಿನಗಳ ಸಾಹಿತ್ಯ- ಸಾಂಸ್ಕೃತಿಕ ಹಬ್ಬದ 9 ದಿನ ಬೆಳಗ್ಗೆ ಅಷ್ಟಾವಧಾನ ಕಾರ್ಯಕ್ರಮ ನಡೆಯಿತು. ಅವಧಾನಿಯಾಗಿ ಶ್ರೀ ಗಣೇಶ್ ಭಟ್ಟ ಕೊಪ್ಪಲತೋಟ ಹಾಗೂ ಪ್ರಚ್ಛಕರಾಗಿ
ನಿಷೇಧಾಕ್ಷರ- ಶ್ರೀ ಶ್ರೀಧರ ಸಾಲಿಗ್ರಾಮ
ಸಮಸ್ಯಾಪೂರಣ- ಶ್ರೀ ರವೀಂದ್ರ ಹೊಳ್ಳ
ದತ್ತಪದಿ- ಶ್ರೀ ಸೋಮಶೇಖರ ಶರ್ಮ
ಚಿತ್ರಕವಿತೆ- ಶ್ರೀ ಶ್ರೀಶ ಕಾರಂತ
ಆಶುಕವಿತೆ- ಶ್ರೀ ನೀಲಕಂಠ ಕುಲಕರ್ಣಿ
ಉದ್ದಿಷ್ಟಾಕ್ಷರಿ- ಶ್ರೀ ಸುದರ್ಶನ ಮುರಳೀಧರ
ಅಪ್ರಸ್ತುತಪ್ರಸಂಗ- ಶ್ರೀ ಕೆ.ಬಿ.ಎಸ್ ರಾಮಚಂದ್ರ
ಕಾವ್ಯವಾಚನ- ಶ್ರೀ ವಿಶ್ವಂಭರ ಹೆಬ್ಬಳಲು ವೇದಿಕೆಯನ್ನು ಅಲಂಕರಿಸಿದರು.























