ಪುಸ್ತಕ ಪರಿಚಯ: ಭಾರತ-ಭಾರತಿ ಪುಸ್ತಕ ಸಂಪದ –ಕಾವೇರಿ, ಎಂಆರ್ ನರಸಿಂಹನ್ ರಚಿಸಿದ ಕೃತಿ

ಪುಸ್ತಕ ಪರಿಚಯ: ಭಾರತ-ಭಾರತಿ ಪುಸ್ತಕ ಸಂಪದ –ಕಾವೇರಿ
ಲೇಖಕರು: ಎಂ.ಆರ್. ನರಸಿಂಹನ್

ಭಾರತದಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಒಂದು ಕಾವೇರಿ. ದಕ್ಷಿಣದ ಗಂಗೆ ಎಂದು ಕರೆಸಿಕೊಳ್ಳುವ ಕಾವೇರಿ ಭಾರತದ ಪುಣ್ಯ ನದಿಗಳ ಸಾಲಿಗೆ ಸೇರಿದೆ. ಅಗಸ್ತ್ಯ ಮಹರ್ಷಿಗಳ ಅನುಗ್ರಹದಿಂದ ಕಾವೇರಿಯು ದಕ್ಷಿಣ ಭಾರತದಲ್ಲಿ ಹೊನಲಾಗಿ ಹರಿಯುತ್ತಾಳೆ.
ಕಾವೇರಿ ಮಾತೆಯ ದಿವ್ಯ ಕಥೆ ಹಲವು ಪುರಾಣಗಳಲ್ಲಿ ವಿವಿಧ ರೀತಿಯಲ್ಲಿ ನಿರೂಪಿತವಾಗಿದೆ. ಸ್ಕಂದ ಪುರಾಣದ ಪ್ರಕಾರ ಕಾವೇರಿ ಕೈಲಾಸದಲ್ಲಿ ಹರಿಯುತ್ತಿದ್ದ ನದಿ. ಈಶ್ವರನ ಅಣತಿಯಂತೆ ಅಗಸ್ತ್ಯರು ಕಮಂಡಲದಲ್ಲಿ ಅದರ ನೀರನ್ನು ತುಂಬಿಕೊಂಡು ದಕ್ಷಿಣ ದೇಶಕ್ಕೆ ತರುತ್ತಾರೆ. ಶೂರಪದ್ಮನೆಂಬ ಅಸುರನು ತನ್ನ ಮಂತ್ರ ಸಾಮರ್ಥ್ಯದಿಂದ ಮಳೆಯನ್ನು ತಡೆದು ಹಿಡಿದಿರಲು ಕ್ಷಾಮ ಪ್ರದೇಶವಾಗಿದ್ದ ಈ ತಾಣಕ್ಕೆ ಅಗಸ್ತ್ಯರು ಬರುತ್ತಾರೆ. ಅವರು ತಪಸ್ಸಿಗೆ ಕುಳಿತಿರುವಾಗ ಪರಿಸ್ಥಿತಿಯಿಂದ ಕೆಂಗೆಟ್ಟಿದ್ದ ದೇವೇಂದ್ರನು ವಿನಾಯಕನನ್ನು ಪ್ರಾರ್ಥಿಸಿ ಕಾಗೆಯ ರೂಪ ತಳೆದ ಅವನಿಂದ ಅಗಸ್ತ್ಯರ ಕಮಂಡಲವನ್ನು ಉರುಳುವಂತೆ ಮಾಡಿಸುತ್ತಾನೆ. ಆ ಸಂದರ್ಭದಲ್ಲಿ ಕಮಂಡಲದಲ್ಲಿದ್ದ ನೀರು ಹೊನಲಾಗಿ ಹರಿಯುತ್ತದೆ. ಅದುವೇ ನಮ್ಮ ಕಾವೇರಿ ನದಿ.
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹರಿಯುವ ಕಾವೇರಿ ನದಿಯ ಉಗಮದ ಕಥೆಯನ್ನು ತಮಿಳುನಾಡಿನಲ್ಲಿ ಬೇರೆಯದೇ ರೀತಿಯಲ್ಲಿ ಹೇಳಲಾಗುತ್ತದೆ. ಕಾವೇರಿಯ ಬಗ್ಗೆ ಒಂದೊಂದು ಕಡೆ ಒಂದೊಂದು ರೀತಿಯ ಕಥೆಗಳನ್ನು ಹೇಳಲಾಗುತ್ತದೆಯಾದರೂ ಎಲ್ಲಾ ಕಥೆಗಳಲ್ಲೂ ಇರುವುದು ಆಕೆಯ ಆದರ್ಶ, ಆಕಾಂಕ್ಷೆ, ಪರೋಪಕಾರ ಮನೋಭಾವ, ಆದರ್ಶ ದಾಂಪತ್ಯ, ನಿಷ್ಠ ಜೀವನ, ಧ್ಯೇಯ, ಸಾಧನೆ, ಮಹಿಮೆ ಹಿರಿಮೆಗಳು.
ಜಗತ್ಪಾವನೆಯಾದ ಕಾವೇರಿ ದಕ್ಷಿಣ ಭಾರತದಲ್ಲಿ ಹರಿದು ಕೋಟಿ ಕೋಟಿ ಜೀವಗಳಿಗೆ ನೀರನ್ನೂ ಅನ್ನವನ್ನೂ ಕೊಟ್ಟು ಕಾಪಾಡುತ್ತಿದ್ದಾಳೆ. ಕಾವೇರಿಯನ್ನು ದಕ್ಷಿಣ ಭಾರತದ ಬಂಗಾರದ ನದಿ ಎಂದು ಜನ ಕರೆಯುತ್ತಾರೆ. ತಮಿಳುನಾಡಿನಲ್ಲಿ ಆಕೆಯನ್ನು ಪೊನ್ನಿ ಎಂದು ಪ್ರೀತಿಯಿಂದ ಆದರಿಸುತ್ತಾರೆ.
ಕಾವೇರಿಯ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳಲು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನದ ಭಾರತ-ಭಾರತಿ ಪುಸ್ತಕ ಸಂಪದದ ಕಾವೇರಿ ಪುಸ್ತಕ ಓದಿ.
📖 ಇಂತಹ ಸಾವಿರಾರು ಮಹಾನ್ ಸಾಧಕರ ಕಥೆಗಳನ್ನು ತಿಳಿಯಲು 👉 ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನದ ಭಾರತ-ಭಾರತಿ ಪುಸ್ತಕ ಸಂಪದವನ್ನು ಖರೀದಿಸಿ. ಖರೀದಿಸಲು ಲಿಂಕ್‌ ಇಲ್ಲಿದೆ

ಕನ್ನಡ ಪುಸ್ತಕ ಹಬ್ಬ 2025ಕ್ಕೆ ನಿಮಗೆ ಸ್ವಾಗತ | ಪುಸ್ತಕ ಹಬ್ಬದ ಸಂಪೂರ್ಣ ಕಾರ್ಯಕ್ರಮಗಳ ವಿವರ ಇಲ್ಲಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top