ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡ ಪುಸ್ತಕ ಹಬ್ಬ 2025: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

ಕನ್ನಡ ಪುಸ್ತಕ ಹಬ್ಬ ಸ್ಪರ್ಧೆಗಳು

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ‘ಕನ್ನಡ ಪುಸ್ತಕ ಹಬ್ಬ’ವನ್ನು (kannada pustaka habba 2025) ನವೆಂಬರ್ 1 ರಿಂದ ಡಿಸೆಂಬರ್ 7, 2025ರ ವರೆಗೆ ಆಯೋಜಿಸಲಾಗಿದೆ. ಈ ಹಬ್ಬದ ಅಂಗವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಒಟ್ಟು ಮೂರು ವಿಭಾಗಗಳಲ್ಲಿ 10 ಸ್ಪರ್ಧೆಗಳು ನಡೆಯಲಿದ್ದು, ದೇಶಭಕ್ತಿ, ನಾಡು-ನುಡಿ, ಸಾಹಿತ್ಯ, ಇತಿಹಾಸ ಮತ್ತು ಪರಿಸರ ಸಂರಕ್ಷಣೆಯಂತಹ ವಿಷಯಗಳನ್ನು ಆಧರಿಸಿವೆ.

ಸ್ಪರ್ಧೆಗಳ ವಿವರ


ವಿಭಾಗ 1: 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ
ಗೀತಗಾಯನ: ವೈಯಕ್ತಿಕ ಮತ್ತು ಗುಂಪು ಸ್ಪರ್ಧೆಗಳಾಗಿ ಎರಡು ಪ್ರತ್ಯೇಕ ಕಾರ್ಯಕ್ರಮಗಳು.
ಚಿತ್ರ ಬರೆಯುವ ಸ್ಪರ್ಧೆ: ದೇಶಭಕ್ತಿ ಮತ್ತು ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಕಲೆ.

ವಿಭಾಗ 2: 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ
ದೇಶಭಕ್ತಿ/ನಾಡು-ನುಡಿ ಗೀತಗಾಯನ: ವೈಯಕ್ತಿಕ ಮತ್ತು ಗುಂಪು ರೂಪದಲ್ಲಿ ಎರಡು ಪ್ರತ್ಯೇಕ ಸ್ಪರ್ಧೆಗಳು.
ಚರ್ಚಾ ಸ್ಪರ್ಧೆ: ವಿದ್ಯಾರ್ಥಿಗಳ ಬೌದ್ಧಿಕ ಚಿಂತನೆಯನ್ನು ಉತ್ತೇಜಿಸುವ ವೇದಿಕೆ.
ವಿಡಿಯೋ-ಭಾಷಣ ಸ್ಪರ್ಧೆ: ‘ನನ್ನ ಮೆಚ್ಚಿನ ಕನ್ನಡ ಸಾಹಿತಿ’ ಎಂಬ ವಿಷಯದಲ್ಲಿ ಭಾಷಣವನ್ನು ವಿಡಿಯೋ ರೂಪದಲ್ಲಿ ರೆಕಾರ್ಡ್ ಮಾಡಿ 95911 55622 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು.
ಲೇಖನ ಸ್ಪರ್ಧೆ: ‘ಭಾರತದ ನಿಜ-ಇತಿಹಾಸ: ಶೌರ್ಯದ್ದೇ? ಸೋಲಿನದ್ದೇ?’ ಎಂಬ ವಿಷಯದಲ್ಲಿ ಚಿಂತನಾತ್ಮಕ ಲೇಖನ.

ವಿಭಾಗ 3: ಪದವಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ
ಪುಸ್ತಕ ಪರಿಚಯ: ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಆಯ್ದ 10 ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಪರಿಚಯಿಸುವ ಸ್ಪರ್ಧೆ.
ಭಾಷಣ ಸ್ಪರ್ಧೆ: ‘ಪರಿಸರ ಸಂರಕ್ಷಣೆ: ಭಾರತೀಯ ಚಿಂತನೆ ಮತ್ತು ವರ್ತಮಾನದ ಅನಿವಾರ್ಯತೆ’ ಎಂಬ ವಿಷಯದಲ್ಲಿ ಭಾಷಣ.

ಗಮನಿಸಿ: ಈ ಸ್ಪರ್ಧೆಗಳ ಕುರಿತು ಸಂಪೂರ್ಣ ವಿವರ ಪಡೆಯಲು ಈ ಕೆಳಗೆ ನೀಡಲಾದ ಪೋಸ್ಟರ್‌ಗಳನ್ನು ಗಮನಿಸಿ. ಪ್ರತಿ ಸ್ಪರ್ಧೆಯ ವಿವರಗಳು, ನಿಯಮಗಳನ್ನು ತಿಳಿದುಕೊಂಡು ಭಾಗವಹಿಸಿ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top