ನವೆಂಬರ್‌ 26 ಸಂವಿಧಾನ ದಿನ: ಸಾಹಿತ್ಯಾಸಕ್ತರು ಓದಲೇಬೇಕಾದ 5 ಪುಸ್ತಕಗಳು

Constitution-day-2025-must-read-kannada-books
ನವೆಂಬರ್ 26 ಸಂವಿಧಾನ ದಿನಕ್ಕೆ ಓದಬೇಕಾದ ಕನ್ನಡ ಪುಸ್ತಕಗಳು

ಇಂದು ನವೆಂಬರ್ 26 – ಭಾರತದ ಸಂವಿಧಾನ ದಿನ. 1949ರ ಈ ದಿನದಂದು ಸಂವಿಧಾನ ಸಭೆಯು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಅಂಗೀಕರಿಸಿತು. 2015ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಂತೆ ಪ್ರತಿ ವರ್ಷ ಈ ದಿನವನ್ನು ‘ಸಂವಿಧಾನ ದಿನ’ವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದ ಇತಿಹಾಸ, ಮೌಲ್ಯಗಳು, ರಚನಾ ಹಿನ್ನೆಲೆ ಮತ್ತು ಅಂಬೇಡ್ಕರ್ ಅವರ ಕೊಡುಗೆಯನ್ನು ಆಳವಾಗಿ ಅರ್ಥೈಸಲು ಓದುಗರು ಕೆಲವು ಅಮೂಲ್ಯ ಪುಸ್ತಕಗಳನ್ನು ಓದಬೇಕು.

ಸಂವಿಧಾನ ಬದಲಾಯಿಸಿದ್ದು ಯಾರು?

ಲೇಖಕರು: ವಿಕಾಸ್ ಕುಮಾರ್ ಪಿ
ಪ್ರಕಾಶಕರು: ಸಾಹಿತ್ಯ ಬುಕ್ಸ್
ಈ ಪುಸ್ತಕವು ಭಾರತೀಯ ಸಂವಿಧಾನದ ರಚನೆಯ ಹಿನ್ನೆಲೆ, ಅಂಬೇಡ್ಕರ್ ಅವರ ಪಾತ್ರ, ಸಂವಿಧಾನ ಸಭೆಯ ಚರ್ಚೆಗಳು, ಜಾತಿ-ಧರ್ಮ-ಲಿಂಗ ಭೇದ ವಿರುದ್ಧದ ಹೋರಾಟದ ಕಥೆಯನ್ನು ಸರಳವಾಗಿ ಆದರೆ ಆಳವಾಗಿ ವಿವರಿಸುತ್ತದೆ. ಸಂವಿಧಾನ ಎಂದರೆ ಕೇವಲ ಕಾನೂನು ದಸ್ತಾವೇಜು ಅಲ್ಲ, ಒಂದು ಸಾಮಾಜಿಕ ಕ್ರಾಂತಿಯ ಪ್ರತೀಕ ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ. ʼಬಾಬಾಸಾಹೇಬರ ಸಂವಿಧಾನ ನಮಗೆ ದಾರಿ ದೀಪ. ಬಾಬಾಸಾಹೇಬರ ಸಂವಿಧಾನ ನಮಗೆ ಧರ್ಮ ಗ್ರಂಥ. ನಮ್ಮ ಸರ್ಕಾರ ನಡೆಸುವುದಕ್ಕಿರುವ ಧರ್ಮಗ್ರಂಥ. ನಾನು ಸಂವಿಧಾನ ದಿವಸ ಆಚರಿಸುವ ಪ್ರಸ್ತಾಪನೆಯನ್ನು ಸದನದಲ್ಲಿ ಮಾಡಿದಾಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಧ್ಯಪ್ರವೇಶಿಸಿ ಅದರ ಅಗತ್ಯವೇನಿದೆ ಎಂದು ಪ್ರಶ್ನಿಸಿ ವಿರೋಧಿಸಿದ್ದರು. ಆಗ ನಾನವರಿಗೆ, ಮಹಾಭಾರತ, ರಾಮಾಯಣದ ಬಗ್ಗೆ ಸತತ ಕಥೆ, ಕೀರ್ತನೆಗಳು ನಡೆಯುವುದರಿಂದ ಹೊಸ ಪೀಳಿಗೆಗೆ ಅವುಗಳ ಮೇಲೆ ಶ್ರದ್ಧೆ, ಭಕ್ತಿ ಮೂಡುವ ಹಾಗೆ ಸಂವಿಧಾನವನ್ನು ಅದೇ ಭಾವದಲ್ಲಿ ಜನರು ಕಾಣುವಂತೆ ನಾವು ಮಾಡಬೇಕಿದೆ ಎಂದಿದ್ದೆ. ಸಂವಿಧಾನ ಕೇವಲ ನ್ಯಾಯಾಲಯಗಳಿಗೆ ಸೀಮಿತವಾಗಬಾರದು. ಸಂವಿಧಾನವು ನಮ್ಮ ಜೀವನಕ್ಕೆ, ನಮ್ಮ ಸಂಸ್ಕಾರಗಳಿಗೆ, ನಮ್ಮ ಭಾವನೆಗಳಿಗೆ ನವಚೈತನ್ಯವನ್ನು ಕೊಡಬಲ್ಲದು, ಅದಕ್ಕಾಗಿ ನಾವದನ್ನು ಜನರ ಮನಸ್ಸಿನವರೆಗೂ ತೆಗೆದುಕೊಂಡು ಹೋಗಬೇಕು. ಸಂವಿಧಾನವು ಕಾಂಗ್ರೆಸ್ಸಿಗೆ ರಾಜಕೀಯ ಅಸ್ತ್ರವಾಗಿರಬಹುದು, ಆದರೆ ನಮಗೆ ಸಂವಿಧಾನವು ಶ್ರದ್ಧೆಯ ಕೇಂದ್ರವಾಗಿದೆ. ಆಸ್ಥೆಯ ಕೇಂದ್ರವಾಗಿದೆ. 2047ರ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಾರ್ಗದರ್ಶಿಯಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತನ್ನೂ ಈ ಪುಸ್ತಕ ನೆನಪಿಸುತ್ತದೆ. ಸಂವಿಧಾನ ದಿನಕ್ಕೆ ಓದಲೇಬೇಕಾದ ಮೊದಲ ಪುಸ್ತಕ.

ಸಂವಿಧಾನ ಬದಲಾಯಿಸಿದ್ದು ಯಾರು? | ವಿಕಾಸ್ ಕುಮಾರ್ ಪಿ |

Original price was: ₹299.00.Current price is: ₹270.00.

ಬಾಬಾಸಾಹೇಬರ ಸಂವಿಧಾನ ನಮಗೆ ದಾರಿ ದೀಪ. ಬಾಬಾಸಾಹೇಬರ ಸಂವಿಧಾನ ನಮಗೆ ಧರ್ಮ ಗ್ರಂಥ. ನಮ್ಮ ಸರ್ಕಾರ ನಡೆಸುವುದಕ್ಕಿರುವ ಧರ್ಮಗ್ರಂಥ.

ನವೆಂಬರ್‌ 26 ಸಂವಿಧಾನ ದಿನ: ಸಾಹಿತ್ಯಾಸಕ್ತರು ಓದಲೇಬೇಕಾದ 5 ಪುಸ್ತಕಗಳು

ಎಮರ್ಜೆನ್ಸಿ – ಸಂವಿಧಾನದ ಕೊಲೆಗೆ ನಡೆದ ಸಂಚು

ಲೇಖಕರು: ರೋಹಿತ್ ಚಕ್ರತೀರ್ಥ
ಸತ್ಯಮೇವ ಜಯತೇ – ಈ ರಾಷ್ಟ್ರದ ಘೋಷವಾಕ್ಯ. ಇಂದಿರಾ ಗಾಂಧಿ ಬಲಾತ್ಕಾರದಿಂದ ಹುದುಗಿಟ್ಟ ಸತ್ಯಗಳು ಇನ್ನಾದರೂ ಪೂರ್ಣವಾಗಿ ಹೊರಬರಲೇಬೇಕಿದೆ. ದುಷ್ಟರ ದೌಷ್ಟ್ಯವನ್ನು ಘಂಟಾಘೋಷವಾಗಿ ಸಾರದಿದ್ದರೆ ಸಜ್ಜನರಿಗೆ ತಮ್ಮ ಸಜ್ಜನಿಕೆಯ ಬಗ್ಗೆಯೇ ಪಾಪಪ್ರಜ್ಞೆ ಕಾಡಬಹುದಲ್ಲವೆ?. ಈ ಪುಸ್ತಕವನ್ನು ಸಾಹಿತ್ಯಬುಕ್ಸ್‌.ಕಾಂ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.

ರಾಷ್ಟ್ರ ನಾಯಕ ಡಾ. ಅಂಬೇಡ್ಕರ್

ಲೇಖಕರು: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಬುಕ್ಸ್
ಡಾ. ಬಿ. ಆರ್‌. ಅಂಬೇಡ್ಕರ್‌ ಜೀವನಚಿತ್ರಣ ತೆರೆದಿಡುವ ಪುಸ್ತಕವಿದು. ಅಂಬೇಡ್ಕರ್‌ ಹಾಗೂ ಸಂವಿಧಾನದ ಕುರಿತು ತಿಳಿದುಕೊಳ್ಳಲು ಬಯಸುವವರಿಗೆ ಇದೊಂದು ಉತ್ತಮ ಪುಸ್ತಕ. ಸಂವಿಧಾನ ದಿನದಂದು ಅಂಬೇಡ್ಕರ್ ಅವರನ್ನು ನೆನೆಯಲು ಉತ್ತಮ ಆಯ್ಕೆಯಾಗಿದೆ.‌

ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್

ಲೇಖಕರು: ಮೂಲ- ದತ್ತೋಪಂತ ಠೇಂಗಡಿ, ಕನ್ನಡಕ್ಕೆ- ಚಂದ್ರಶೇಖರ ಭಂಡಾರಿ
ಡಾ. ಬಾಬಾಸಾಹೇಬರ ಮೇರುವ್ಯಕ್ತ್ತಿತ್ವದ ಔನ್ನತ್ಯ ಹಾಗೂ ಅವರ ಜೀವನಕಾಲದ ಬಹುಮುಖ ಆಯಾಮಗಳು, ದಲಿತ ಸಮುದಾಯದ ಏಳ್ಗೆಗಾಗಿ ಅವರು ನಡೆಸಿದ್ದ ಹೋರಾಟಗಳು, ಅವರ ಚಿಂತನೆಯ ಆಳ ಮತ್ತು ವಿಸ್ತಾರ, ಸಂವಿಧಾನ ರಚನೆಯ ಭೀಮಕಾರ್ಯ ಮತ್ತು ಭೌದ್ಧಮತ ಸ್ವೀಕರಿಸಿದ ಅವರ ಯಥಾರ್ಥ ಮನೋಭೂಮಿಕೆ – ಇವುಗಳ ಆಧಾರ ಸಹಿತ ದರ್ಶನವನ್ನು ಈ ಕೃತಿಯಲ್ಲಿ ಕಾಣಬಹುದು. ಬಾಬಾಸಾಹೇಬರ ಬದುಕಿನ ಸಂಧ್ಯಾಕಾಲದ ಕೊನೆಯ ನಾಲ್ಕು ವರ್ಷಗಳಲ್ಲಿ ಅವರ ನಿಕಟ ಸಂಪರ್ಕದಲ್ಲಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಕಾರ್ಮಿಕ ನಾಯಕ ದತ್ತೋಪಂತ ಠೇಂಗಡಿ ಅವರು ಮರಾಠಿಯಲ್ಲಿ ಬರೆದ ’ಸಾಮಾಜಿಕ ಕ್ರಾಂತೀಚೀ ವಾಟಚಾಲ ಆಣಿ ಡಾ|| ಅಂಬೇಡ್ಕರ್, ಪುಸ್ತಕದ ಕನ್ನಡಾನುವಾದವೇ ’ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್’. ಇದು ಡಾ. ಬಾಬಾ ಸಾಹೇಬರ ಜೀವನ ಚರಿತ್ರೆಯಲ್ಲ; ಆದರೆ ಅವರ ವ್ಯಕ್ತಿತ್ವ ಮತ್ತು ಜೀವನಕಾರ್ಯದ ಕುರಿತ ಅಧ್ಯಯನಪೂರ್ಣ ಶಬ್ದಚಿತ್ರ. ಪರಸ್ಪರ ಭೇಟಿಯಾದಾಗಲೆಲ್ಲ ಅವರಿಬ್ಬರ ನಡುವೆ ಗಂಭೀರ ವೈಚಾರಿಕ ಸ್ತರದಲ್ಲಿ ಸಂವಾದ ನಡೆಯುತ್ತಿತ್ತು. ಈ ಸಂವಾದ-ಜಿಜ್ಞಾಸೆಗಳಿಂದ ಠೇಂಗಡಿ ಅವರ ಈ ಕೃತಿಯು ಅಂಬೇಡ್ಕರ್ ಅವರ ಚಿಂತನರೀತಿಯನ್ನೂ ವಿಶಾಲ ದೃಗ್‌ಭೂಮಿಕೆಯನ್ನೂ ಪ್ರಖರ ರಾಷ್ಟ್ರೀಯತಾ ನಿಷ್ಠೆಯನ್ನೂ ಆಧಾರಭೂತವಾಗಿ ಎತ್ತಿ ತೋರಿಸಿದೆ.‌

ಭುಗಿಲು

ಇದು ಸಂವಿಧಾನ ದಿನಕ್ಕೆ ನೇರವಾಗಿ ಸಂಬಂಧಪಟ್ಟ ಪುಸ್ತಕವಲ್ಲ. ಆದರೆ, ಸಂವಿಧಾನವನ್ನೇ ಧೂಳೀಪಟ ಮಾಡಿದ ನೈಜ ಕಥೆಯನ್ನು ಹೇಳುವ ಪುಸ್ತಕವಿದು. ಇದು ಭಾರತದ 1975-77ರ ಜನಕ್ರಾಂತಿಯ ಸತ್ಯಕಥೆ. ಭಾರತದಲ್ಲಿ ಸ್ವಾತಂತ್ರ್ಯಸಿದ್ಧಿಯಾಗಿ ಪ್ರಜಾಪ್ರಭುತ್ವ ಜಾರಿಗೆ ಬಂದು ಇಪ್ಪತ್ತೇಳು ವರ್ಷಗಳಷ್ಟೆ ದಾಟಿದ್ದಾಗ (ಜೂನ್ 25, 1975) ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನೇ ಧೂಳೀಪಟ ಮಾಡಿ ದೇಶಾದ್ಯಂತ ‘ತುರ್ತುಪರಿಸ್ಥಿತಿ’ಯನ್ನು ಜಾರಿಗೊಳಿಸಿತು. ಪ್ರಜೆಗಳ ಎಲ್ಲ ಮೂಲಭೂತ ಹಕ್ಕುಗಳನ್ನು ಅಪಹರಣ ಮಾಡಿ ಕಾಂಗ್ರೆಸ್ಸೇತರ ರಾಷ್ಟ್ರನಾಯಕರನ್ನೂ ಪ್ರಜಾಪ್ರಭುತ್ವಪರ ಸಾಮಾಜಿಕ ಕಾರ್ಯಕರ್ತರನ್ನೂ ಜೈಲಿಗೆ ತಳ್ಳಿ ಅಪರಿಮಿತ ಹಿಂಸೆಯೊಡಗೂಡಿದ ಅಮಾನುಷ ಪೊಲೀಸ್ ರಾಜ್ಯವನ್ನು ಜಾರಿಗೊಳಿಸಿತು. ತುರ್ತುಪರಿಸ್ಥಿತಿ ಎಂಬ ಇಪ್ಪತ್ತು ತಿಂಗಳ ಆ ಅತಿಘೋರ ದಮನಶಾಹಿಯಿಂದ ದೇಶವನ್ನು ಮುಕ್ತಗೊಳಿಸಲು ಸಾವಿರ ಸಾವಿರ ಮಂದಿ ತ್ಯಾಗಮಯ ದೇಶಪ್ರೇಮಿಗಳು ಬೆವರು-ರಕ್ತಗಳನ್ನು ನೀರಿನಂತೆ ಹರಿಸಬೇಕಾಯಿತು. ಎಷ್ಟೊ ಮಂದಿಯ ಬಲಿದಾನವೂ ಆಯಿತು. ದೇಶದಾದ್ಯಂತ ನಡೆದ ಆ ಸ್ವಾತಂತ್ರ್ಯ ಸಂಘರ್ಷದ ಸಂಕ್ಷಿಪ್ತ ಚಿತ್ರಣದ ಜೊತೆಗೆ ಕರ್ನಾಟಕವು ಅದಕ್ಕೆ ಸಲ್ಲಿಸಿದ ವಿಶಿಷ್ಟ ಕಾಣಿಕೆಯ ವಿಸ್ತಾರವಾದ ವರ್ಣನೆ ಈ ಪುಸ್ತಕದಲ್ಲಿದೆ.

ಭುಗಿಲು | ಹೊ ವೆ ಶೇಷಾದ್ರಿ |

Original price was: ₹750.00.Current price is: ₹675.00.

ಸಂವಿಧಾನ ದಿನದಂದು ಕೇವಲ ಶುಭಾಶಯಗಳನ್ನು ಹಂಚಿಕೊಳ್ಳದೆ, ಸಂವಿಧಾನದ ಮೌಲ್ಯಗಳನ್ನು ಆಳವಾಗಿ ಅರ್ಥೈಸಿಕೊಳ್ಳೋಣ. ಮೇಲಿನ ಐದು ಪುಸ್ತಕಗಳನ್ನು ಓದಿ. ಅದು ನಿಮಗೆ ಭಾರತದ ಸಂವಿಧಾನದ ಬಗ್ಗೆ ಹೊಸ ಒಳನೋಟ ನೀಡಲಿದೆ.
ಈ ಪುಸ್ತಕಗಳು ಎಲ್ಲವೂ ಸಾಹಿತ್ಯ ಬುಕ್ಸ್‌ ವೆಬ್‌ಸೈಟ್‌ನಲ್ಲಿ (sahityabooks.com) ಲಭ್ಯವಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top