ಕರ್ನಾಟಕ ರಾಜ್ಯೋತ್ಸವದಿಂದ ಆರಂಭಗೊಂಡ ಐದನೇ ಪುಸ್ತಕ ಹಬ್ಬದ ಪ್ರಯುಕ್ತ 37 ದಿನಗಳ ಸಾಹಿತ್ಯ- ಸಾಂಸ್ಕೃತಿಕ ಉತ್ಸವವು ಸಂಭ್ರಮದಿಂದ ಸಾಗಿ ಬರುತ್ತಿದೆ. ಈ ಉತ್ಸವದ 24ನೇ ದಿನವಾದ ಸೋಮವಾರದಂದು ದೀಪಿಕಾ ಭಟ್ ಅವರು ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹಾಡುಗಾರಿಕೆಯ ಜೊತೆಗೆ ಭಾವನೆಗಳನ್ನು ತುಂಬಿ ಕೇಳುಗರನ್ನು ಸಂಗೀತ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾದರು.


























