ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುತ್ತಿರುವ 5ನೇ ಕನ್ನಡ ಪುಸ್ತಕ ಹಬ್ಬದಲ್ಲಿ ಸಂಸ್ಕಾರ ಭಾರತೀ ಬೆಂಗಳೂರು ಇವರ ಸಹಯೋಗದಲ್ಲಿ 37 ದಿನಗಳ ಸಾಹಿತ್ಯ- ಸಂಸ್ಕೃತಿ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಈ ಉತ್ಸವದ ಆರನೇ ದಿನವಾದ ನಿನ್ನೆ ಡಾ|| ಶೋಭಾ ಶಶಿಕುಮಾರ್ ಅವರು “ಹೇ ರಾಮ ನಿನಗಾಂ ಋಣೀ” ಎನ್ನುವ ಭರತನೃತ್ಯದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದರು. ಭರತನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಆಗಿರುವ ಛಾಪನ್ನು ಮೂಡಿಸಿರುವ ಶೋಭಾ ಅವರು ಭರತನೃತ್ಯದ ಮೂಲಕ ರಾಮಾಯಣವನ್ನು ತುಂಬಾ ಸೊಗಸಾಗಿ ಪ್ರಸ್ತುತಪಡಿಸಿದರು. ಭರತನೃತ್ಯವನ್ನು ಇನ್ನೂ ಚಂದಗಾಣಿಸುವಲ್ಲಿ ಸಾಹಿತ್ಯ ಮತ್ತು ಸಂಗೀತ ಕೈ ಜೋಡಿಸಿತು.
ಸಾಹಿತ್ಯ: ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ಸ್ವರಸಂಯೋಜನೆ: ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ
ಮೃದಂಗ: ವಿದ್ವಾನ್ ಶ್ರೀ ಹರಿ
ನಟುವಾಂಗ: ವಿದುಷಿ ಮಧುಲಿಕಾ
ಮೊರ್ಸಿಂಗ್ ಹಾಗೂ ಕಂಜೀರಾ: ಡಿ. ವಿ ಪ್ರಸನ್ನ ಕುಮಾರ್
ಕೊಳಲು: ವಿದ್ವಾನ್ ಎಚ್ ಎಸ್ ವೇಣುಗೋಪಾಲ್

























































