
ಪುಸ್ತಕ ಪ್ರದರ್ಶನ ಮತ್ತು ಮಾರಾಟ | ನವೆಂಬರ್ 1ರಿಂದ ಡಿಸೆಂಬರ್ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ

ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ | ನವೆಂಬರ್ 1ರಿಂದ ಡಿಸೆಂಬರ್ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ನಡೆಸಿಕೊಡುವ 5ನೇ ವರ್ಷದ ಪುಸ್ತಕ ಹಬ್ಬವು ಈ ವರ್ಷ ನವೆಂಬರ್ 1ರಿಂದ ಡಿಸೆಂಬರ್ 7ರವರೆಗೆ ನಡೆಯಲಿದೆ. ಈ ಬಾರಿ ಒಟ್ಟು 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ, ಸಾಹಿತ್ಯ ಸಿಂಧು ಪ್ರಕಾಶನ ಮಾತ್ರವಲ್ಲದೆ ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ.
***
ಓದುಗರಲ್ಲಿ ಶುದ್ಧ ರಾಷ್ಟ್ರೀಯ ದೃಷ್ಟಿಯನ್ನು ಮೂಡಿಸುವುದು; ಭಾರತದ ನೈಜ ಇತಿಹಾಸವನ್ನು ಪರಿಚಯಿಸುವುದು; ವಿವಿಧ ಸಾಹಿತ್ಯಪ್ರಕಾರಗಳ ಮೂಲಕ ಭಾರತೀಯ ಸಂಸ್ಕೃತಿ-ಪರಂಪರೆಯ ಮೌಲ್ಯಗಳನ್ನು ಜನಮಾನಸದಲ್ಲಿ ಬೇರೂರಿಸುವುದು – ಈ ಉದ್ದೇಶಗಳನ್ನಿಟ್ಟುಕೊಂಡು ಪುಸ್ತಕಗಳ ಪ್ರಕಟನೆ ಹಾಗೂ ಸದಭಿರುಚಿಯ ಸಾಹಿತ್ಯಪ್ರಸಾರಕ್ಕಾಗಿ 1965ರಲ್ಲಿ ಪ್ರಾರಂಭವಾದದ್ದು ‘ರಾಷ್ಟೋತ್ಥಾನ ಸಾಹಿತ್ಯ’, ಸ್ವಾತಂತ್ರ್ಯಪೂರ್ವದಲ್ಲಿ ಅತ್ಯಂತ ಪ್ರಖರವಾಗಿದ್ದ ‘ರಾಷ್ಟ್ರೀಯ ಸಾಹಿತ್ಯ’ದ ವಾರಸಿಕೆಯನ್ನು ಮುಂದುವರಿಸಿದ್ದಲ್ಲದೆ ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಲು ರಾಷ್ಟೋತ್ಥಾನ ಸಾಹಿತ್ಯವು ನಡೆಸಿದ ಸಫಲಪ್ರಯತ್ನಗಳ ಫಲವಾಗಿ ಇಂದು ಕನ್ನಡದಲ್ಲಿ ‘ರಾಷ್ಟ್ರೀಯ ಸಾಹಿತ್ಯ’ವನ್ನು ಧೈರ್ಯವಾಗಿ ಪ್ರಕಟಿಸುವ ಹತ್ತಾರು ಪ್ರಕಾಶನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಇತಿಹಾಸ, ಸಂಸ್ಕೃತಿ, ರಾಷ್ಟ್ರೀಯತೆ, ವ್ಯಕ್ತಿತ್ವವಿಕಾಸ, ಜೀವನಚರಿತ್ರೆ, ವ್ಯಕ್ತಿಚಿತ್ರಗಳು, ಪರಿಸರ, ಆರ್ಥಿಕತೆ, ಆರೋಗ್ಯ, ಯೋಗ ಸೇರಿದಂತೆ ವಿವಿಧ ವಿಷಯ-ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಹೆಚ್ಚು ಪ್ರಕಟನೆಗಳು: ಮಕ್ಕಳಿಗೆ ನಮ್ಮ ಇತಿಹಾಸ-ಸಂಸ್ಕೃತಿ-ಪುರಾಣಗಳ ಮಹಾಪುರುಷರನ್ನು ಪರಿಚಯಿಸುವುದಕ್ಕಾಗಿ ‘ಭಾರತ-ಭಾರತಿ ಪುಸ್ತಕ ಸಂಪದ’ ಹೆಸರಿನಲ್ಲಿ ಆರುನೂರು ಪುಸ್ತಕಗಳು ನಮ್ಮ ಇದುವರೆಗಿನ ಹೆಜ್ಜೆಗುರುತಿನಲ್ಲಿ ದಾಖಲಾಗಿವೆ. ನಮ್ಮ ಹಲವು ಪ್ರಕಟನೆಗಳು ವಿವಿಧ ಅಕಾಡೆಮಿ ಪ್ರಾಧಿಕಾರ ಸಂಸ್ಥೆಗಳ ಗೌರವ-ಪ್ರಶಸ್ತಿಗಳಿಗೂ ಪಾತ್ರವಾಗಿವೆ.
‘ಕನ್ನಡ ಪುಸ್ತಕ ಹಬ್ಬ’ – ಸದಭಿರುಚಿಯ ಸಾಹಿತ್ಯ ಪ್ರಸಾರಕ್ಕಾಗಿ ನಾವು ನಡೆಸುತ್ತಿರುವ ವಿಶಿಷ್ಟ ಪ್ರಯತ್ನ. ನಮ್ಮ ಪ್ರಕಟನೆಗಳಲ್ಲದೆ ಕನ್ನಡದ ಬೇರೆ-ಬೇರೆ ಪ್ರಕಾಶಕರ ಪ್ರಕಟನೆಗಳೂ ಈ ‘ಹಬ್ಬ’ದಲ್ಲಿ ಓದುಗರಿಗೆ ವಿಶೇಷ ರಿಯಾಯಿತಿ ಬೆಲೆಯಲ್ಲಿ ದೊರೆಯಲಿವೆ. ಊಟದ ಎಲೆಯಲ್ಲಿನ ಉಪ್ಪಿನಕಾಯಿಯಂತೆ ಕೆಲವು ಇಂಗ್ಲಿಷ್ ಪುಸ್ತಕಗಳೂ ಪ್ರದರ್ಶನದಲ್ಲಿರುತ್ತವೆ. ಜೊತೆಗೆ ಒಂದಿಷ್ಟು ಮಾತು, ಹರಟೆ, ಹಾಸ್ಯ, ಸಂಗೀತ, ನೃತ್ಯ… ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಹಬ್ಬ’ದ ಸವಿಯನ್ನು ಉಣಬಡಿಸಲಿವೆ.
‘ಕನ್ನಡ ಪುಸ್ತಕ ಹಬ್ಬ’ದ ನೆಪದಲ್ಲಿ ವಿದ್ಯಾರ್ಥಿಗಳಿಗಾಗಿ ಕೆಲವು ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಇವು ಓದಿನ ರುಚಿ ಬಲ್ಲವರಿಗೆ ವೇದಿಕೆ: ಹೊಸಬರಿಗೆ ಓದಿನ ರುಚಿ ಪರಿಚಯಿಸುವ ಅವಕಾಶ…! ಈ ಬಾರಿಯದು ‘ಕನ್ನಡ ಪುಸ್ತಕ ಹಬ್ಬ’ದ 5ನೆಯ ಆವೃತ್ತಿ. ಒಟ್ಟು 37 ದಿನಗಳ ಉತ್ಸವ!
ದಿನವೂ ಬನ್ನಿ! ಜೊತೆಗೆ ಪರಿಚಿತರು-ಸ್ನೇಹಿತರನ್ನೂ ಕರೆತನ್ನಿ!
‘ಕೇಶವಶಿಲ್ಪ’ ಸಭಾಂಗಣ, ರಾಷ್ಟೋತ್ಥಾನ ಪರಿಷತ್ ಕೆಂಪೇಗೌಡನಗರ, ಬೆಂಗಳೂರು 560 004
ಬನ್ನಿ, ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸೋಣ.