- This event has passed.
ನವೆಂಬರ್ 1: ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ

ಉದ್ಘಾಟನಾ ಸಮಾರಂಭದ ವಿವರಗಳು
- ದಿನಾಂಕ: ನವೆಂಬರ್ 1, 2025
- ಸಮಯ: ಬೆಳಗ್ಗೆ 11:00 ಗಂಟೆ
- ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
- ಪ್ರವೇಶ: ಎಲ್ಲರಿಗೂ ಮುಕ್ತ
ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 5ನೇ ಕನ್ನಡ ಪುಸ್ತಕ ಹಬ್ಬ ಇದೇ ನವೆಂಬರ್ 1ರಿಂದ ಡಿಸೆಂಬರ್ 7ರವರೆಗೆ 37 ದಿನಗಳ ಕಾಲ ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಪುಸ್ತಕ ಹಬ್ಬವನ್ನು ಮೈಸೂರು ರಾಜವಂಶಸ್ಥ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ.
ಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವ ಸಂಪನ್ಮೂಲ ಸದಸ್ಯರಾದ ಡಾ|| ಆರ್. ಬಾಲಸುಬ್ರಹ್ಮಣ್ಯಂ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಬಹುಶ್ರುತ ವಿದ್ವಾಂಸರು ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್ ವಹಿಸಲಿದ್ದಾರೆ.
ಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನೆ
ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 1ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ
ನವೆಂಬರ್ 1, 2025ರ ಶನಿವಾರ ಬೆಳಗ್ಗೆ 9.30ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿ. ನಾಗರಾಜ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ದಿನೇಶ್ ಹೆಗ್ಡೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.