
ಕನ್ನಡ ಪುಸ್ತಕ ಹಬ್ಬ 2025 : ಶ್ರೀಮತಿ ಶೋಭಾ ಶಶಿಕುಮಾರ್ ಭರತನಾಟ್ಯ ಕಾರ್ಯಕ್ರಮ
November 6 @ 6:00 pm - 8:00 pm

ಕನ್ನಡ ಪುಸ್ತಕ ಹಬ್ಬ 2025ರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿ ಶ್ರೀಮತಿ ಶೋಭಾ ಶಶಿಕುಮಾರ್ ಅವರ ಭರತನಾಟ್ಯ ಪ್ರದರ್ಶನ ನವೆಂಬರ್ 6ರಂದು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಭರತನಾಟ್ಯದ ಶುದ್ಧ ರೂಪ ಮತ್ತು ಅದ್ಭುತ ಅಭಿವ್ಯಕ್ತಿ ಶಕ್ತಿಗೆ ಹೆಸರಾಗಿರುವ ಶೋಭಾ ಶಶಿಕುಮಾರ್ ಅವರು ದೀರ್ಘಕಾಲದಿಂದ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶೃಂಗಾರ, ಭಕ್ತಿ ಮತ್ತು ದೇಶಭಕ್ತಿಯ ಭಾವಗಳನ್ನು ಅವರ ನೃತ್ಯದಲ್ಲಿ ಭಾವಗರ್ಭಿತವಾಗಿ ಪ್ರದರ್ಶನ ನೀಡುವಲ್ಲಿ ಹೆಸರುಗಳಿಸಿದ್ದಾರೆ. ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವರು ನೀಡಿರುವ ಪ್ರದರ್ಶನಗಳು ಕಲಾಭಿಮಾನಿಗಳಿಂದ ಪ್ರಶಂಸೆಯನ್ನು ಪಡೆದಿವೆ.
ದಿನಾಂಕ: ನವೆಂಬರ್ 6, 2025
ಸಮಯ: ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ
ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಪ್ರವೇಶ: ಎಲ್ಲರಿಗೂ ಮುಕ್ತ