
ಕನ್ನಡ ಪುಸ್ತಕ ಹಬ್ಬ 2025: ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಅವರ ಕೊಳಲು ವಾದನ – ಗೋಕುಲೋತ್ಸವ

ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿರುವ 37 ದಿನಗಳ ಕನ್ನಡ ಪುಸ್ತಕ ಹಬ್ಬದ ಎರಡನೇ ದಿನ ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಕೊಳಲು ವಾದನ ಪ್ರಮುಖ ಆಕರ್ಷಣೆಯಾಗಿರಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಕೊಳಲು ವಾದಕರಾದ ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಅವರ ನೇತೃತ್ವದಲ್ಲಿ ಗೋಕುಲೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಕೊಳಲು ಸಂಗೀತದ ಮೂಲಕ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅನುಭವವನ್ನು ನೀಡುವ ಒಂದು ವಿಶಿಷ್ಟ ಉತ್ಸವವಾಗಿದೆ.
ಕಾರ್ಯಕ್ರಮದ ವಿವರಗಳು
ದಿನಾಂಕ: ನವೆಂಬರ್ 2, 2025
ಸಮಯ:
ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಪ್ರವೇಶ: ಎಲ್ಲರಿಗೂ ಮುಕ್ತ
ಗೋಕುಲೋತ್ಸವ ಕಾರ್ಯಕ್ರಮದ ಮುಖ್ಯಾಂಶಗಳು
ಗೋಕುಲೋತ್ಸವ ಎನ್ನುವುದು ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಅವರ ಗೋಕುಲಂ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ಆಯೋಜಿಸಲಾಗುವ ಒಂದು ವಿಶಿಷ್ಟ ಕೊಳಲು ಸಮೂಹ ವಾದನ ಕಾರ್ಯಕ್ರಮವಾಗಿದೆ. ವಿದ್ವಾನ್ ಹೆಮ್ಮಿಗೆ ಶ್ರೀನಿವಾಸ ಮೂರ್ತಿ ವೇಣುಗೋಪಾಲ್ (ಎಚ್.ಎಸ್. ವೇಣುಗೋಪಲ್) ಅವರು ಬೆಂಗಳೂರಿನ ಪ್ರಸಿದ್ಧ ಕೊಳಲು ವಾದಕರಾಗಿದ್ದಾರೆ. ಮೈಸೂರಿನ ವಿದ್ ಎ.ವಿ. ಪ್ರಕಾಶ್ ಮತ್ತು ಬೆಂಗಳೂರಿನ ಎಂ.ಎಸ್. ಶ್ರೀನಿವಾಸ ಮೂರ್ತಿ ಅವರಿಂದ ತರಬೇತಿ ಪಡೆದ ಅವರು, 30 ವರ್ಷಗಳಿಗೂ ಹೆಚ್ಚು ಕಾಲ ಸೋಲೋ ಮತ್ತು ಸಹಕಲಾವಿದರಾಗಿ ಪ್ರದರ್ಶನ ನೀಡಿದ್ದಾರೆ.
ಗಮನಿಸಿ: ನವೆಂಬರ್ 1ರಿಂದ ಡಿಸೆಂಬರ್ 7ರವರೆಗೆ ಬೆಂಗಳೂರಿನ ಬಸವನಗುಡಿ, ಚಾಮರಾಜಪೇಟೆ ಸಮೀಪವಿರುವ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಕನ್ನಡ ಪುಸ್ತಕ ಹಬ್ಬ 2025 ನಡೆಯಲಿದೆ. 37 ದಿನಗಳ ಪುಸ್ತಕ ಪ್ರದರ್ಶನ, ಮಾರಾಟ ಮತ್ತು 50ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಶ್ರೀ ವಿದ್ಯಾಭೂಷಣರು, ಶ್ರೀಮತಿ ಸಂಗೀತಾ ಕಟ್ಟಿ, ಶ್ರೀ ಫೈಯಾಜ್ ಖಾನ್ ಸೇರಿ ಖ್ಯಾತನಾಮರ ಕಾರ್ಯಕ್ರಮಗಳು ಇರಲಿದೆ. ಶಾಲಾ, ಕಾಲೇಜು ಮಕ್ಕಳಿಗೆ ಸ್ಪರ್ಧೆಗಳು ಸೇರಿದಂತೆ ಹಲವು ಆಕರ್ಷಣೆಗಳು ಇರಲಿವೆ.ರಾಷ್ಟ್ರೋತ್ಥಾನ ಸಾಹಿತ್ಯ, ಸಾಹಿತ್ಯ ಸಿಂಧು ಪ್ರಕಾಶನ ಮಾತ್ರವಲ್ಲದೆ ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ.