ಬೆಂಗಳೂರು: 5ನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಬೆಂಗಳೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ -ಸಾಂಸ್ಕೃತಿಕ ಉತ್ಸವದ 8ನೇ ದಿನ ಜಾನಪದ ಗೀತ ಗಾಯನ ಕಾರ್ಯಕ್ರಮವು ನಡೆಯಿತು. ಕರ್ನಾಟಕ ಜಾನಪದ ಕ್ಷೇತ್ರದಲ್ಲಿ ಕಂಠಸಿರಿಯಿಂದ ತನ್ನದೇ ಛಾಪನ್ನು ಮೂಡಿಸಿರುವ ಪ್ರಸಿದ್ಧ ಕಲಾವಿದರಾದ ಶ್ರೀ ಕಡಬಗೆರೆ ಮುನಿರಾಜು ಹಾಗೂ ತಂಡದವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಲಾಪ್ರೇಮಿಗಳ ವಿನಂತಿಯಂತೆ ಹಲವು ಜಾನಪದ ಪದ್ಯಗಳನ್ನು ಹಾಡುವ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದ ದೃಶ್ಯಗಳು.



























