ಬೆಂಗಳೂರು: ರಾಜ್ಯೋತ್ಸವದಿಂದ ತೊಡಗಿ 37ದಿನಗಳ ಕಾಲ ನಿರಂತರವಾಗಿ ನಡೆಯುವ ಸಾಹಿತ್ಯ-ಸಾಂಸ್ಕೃತಿಕ ಉತ್ಸವ ಕಳೆದ ಆರು ದಿನಗಳಿಂದ ತುಂಬಾ ವಿಜೃಂಭಣೆಯಿಂದ ಸಾಗಿ ಬಂದಿದೆ. ಪುಸ್ತಕ ಹಬ್ಬದ ಪ್ರಯುಕ್ತ; ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯುತ್ತಿದೆ.14ನೇ ದಿನ ಜೈ ಗೋಪಾಲ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ರಾಮಮೂರ್ತಿನಗರ ಹಾಗೂ ಪೂರ್ಣಪ್ರಮತಿ ಶಾಲೆ ಗಿರಿನಗರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.






































