ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಬೆಂಗಳೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ -ಸಾಂಸ್ಕೃತಿಕ ಉತ್ಸವದ 11ನೇ ದಿನ ಸಂಜೆ 6 ಗಂಟೆಗೆ ಕುಮಾರಿ ಅದಿತಿ ಸಿಂಹ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಿತು. ಅದಿತಿ ಸಿಂಹ ಅವರ ಸುಶ್ರಾವ್ಯ ಕಂಠ ಸಿರಿಗೆ ನೆರೆದಿರುವ ಪ್ರೇಕ್ಷಕರು ಮನ ಸೋತರು.





















