ರಾಷ್ಟ್ರೋತ್ಥಾನ ಸಾಹಿತ್ಯದ ಪ್ರದಾನ ಸಂಪಾದಕರಾದ ವಿಘ್ನೇಶ್ವರ ಭಟ್ ಫೇಸ್‌ಬುಕ್‌ನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪುಸ್ತಕಗಳ ಕುರಿತು ಬರೆದ ಬರಹ ಇಲ್ಲಿದೆ. “ಕನ್ನಡ ಭಾಷೆ, ಸಾಹಿತ್ಯಕ್ಷೇತ್ರವನ್ನು ಸಮೃದ್ಧಗೊಳಿಸಿದವರ ಸಾಲಿನಲ್ಲಿ ಗಣ್ಯರು #ಮಾಸ್ತಿವೆಂಕಟೇಶಅಯ್ಯಂಗಾರ್. ಸಣ್ಣಕಥೆಗಳ ಬರವಣಿಗೆಯಲ್ಲಿ ಅವರಿಗೆ ಸರಿಮಿಗಿಲಾಗಿ ನಿಲ್ಲಬಲ್ಲವರು ಇನ್ನೊಬ್ಬರು ಇಲ್ಲ. ಅವರ ‘ಭಾವ’ ಆತ್ಮಕಥೆ ನಮ್ಮನ್ನು ಹೇಗೆಲ್ಲ ಪ್ರಭಾವಿಸಬಲ್ಲುದು ಎಂಬುದನ್ನು ಓದಿಯೇ ಅನುಭವಿಸಬೇಕು. ಕಾದಂಬರಿ, ಕಾವ್ಯ, ಅನುವಾದ, ಜೀವನಚರಿತ್ರೆ …. ಹೀಗೆ ಅವರ ಬರವಣಿಗೆಯ ವ್ಯಾಪ್ತಿ ಮತ್ತು ಪ್ರಕಾರಗಳು ಅಗಾಧವಾದವು.
ಮಾಸ್ತಿಯವರು ಜೀವನ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು. ಅದಕ್ಕೆ ಬರೆದ ಸಂಪಾದಕೀಯ ಬರಹಗಳೇ ಏಳು ಸಂಪುಟಗಳಷ್ಟಿವೆ. ಅದರಲ್ಲಿ ಅವರ ರಾಜಕೀಯ ಚಿಂತನೆ, ರಾಷ್ಟ್ರಹಿತದೃಷ್ಟಿ, ಪಾರದರ್ಶಕ ಆಡಳಿತಕ್ಕಾಗಿನ ಹಂಬಲ, ಅನ್ಯಾಯದ ದಾರಿ ತುಳಿದ ಅಧಿಕಾರಾರೂಢರನ್ನು ರಚನಾತ್ಮಕವಾಗಿ ಟೀಕಿಸುವ ಪ್ರಬುದ್ಧತೆ-ಧೈರ್ಯ – ಹೀಗೆ ಹಲವು ದೃಷ್ಟಿಗಳಿಂದ ಈ ಸಂಪಾದಕೀಯ ಬರಹಗಳು ಮಹತ್ತ್ವ ಪಡೆದಿವೆ. ಸ್ವಾತಂತ್ರ್ಯೋತ್ತರ ದಿನಗಳ ಸ್ಥಿತಿಗತಿಗಳನ್ನು ಕುರಿತು ಮಾಸ್ತಿಯವರ ಸೂಕ್ಷ್ಮ ಅವಲೋಕನಗಳೂ ಈ ಸಂಪುಟಗಳಲ್ಲಿ ದಾಖಲಾಗಿವೆ.
ಗಮನಿಸಿ, ಮಾಸ್ತಿಯವರ ಎಲ್ಲ ಪುಸ್ತಕಗಳೂ #ಕನ್ನಡಪುಸ್ತಕಹಬ್ಬದಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿವೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ಸಾಹಿತ್ಯಾಸಕ್ತರೊಂದಿಗೆ ಹಂಚಿಕೊಳ್ಳಬಹುದು”
ಬರಹ: ವಿಘ್ನೇಶ್ವರ ಭಟ್
ಕನ್ನಡ ಪುಸ್ತಕ ಹಬ್ಬ ನಡೆಯುವ ಸ್ಥಳ
ಕೇಶವಶಿಲ್ಪ ಸಭಾಂಗಣ,
ರಾಷ್ಟ್ರೋತ್ಥಾನ ಪರಿಷತ್ ಆವರಣ
ಕೆಂಪೇಗೌಡನಗರ
ಬೆಂಗಳೂರು – 560004
ಕನ್ನಡ ಪುಸ್ತಕ ಹಬ್ಬ 2025: ಪ್ರತಿದಿನ ನಡೆಯುವ ಕಾರ್ಯಕ್ರಮಗಳ ಕ್ಯಾಲೆಂಡರ್ ಇಲ್ಲಿದೆ














