Showing all 4 results
Price
Category
Status
-
Sahitya Sangama
ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
Buy Nowಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
ಲೇಖಕರು: ಕೃಷ್ಣಪ್ರಸಾದ ಬದಿ
ಪ್ರಕಾಶಕರು: ಸಾಹಿತ್ಯ ಸಂಗಮ
ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು. -
Sahitya Sangama
ಕಾರ್ಯಕರ್ತ | ದತ್ತೋಪಂತ ಠೇಂಗಡಿ
₹120.00 Buy Nowಪುಸ್ತಕದ ಹೆಸರು: ಕಾರ್ಯಕರ್ತ
ಲೇಖಕರು: ದತ್ತೋಪಂತ ಠೇಂಗಡಿ
ಪ್ರಕಾಶಕರು: ಸಾಹಿತ್ಯ ಸಂಗಮ
ಈ ಪುಸ್ತಕದಲ್ಲಿನ ವಿಚಾರ ಸಂಪತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕುರಿತಾದದ್ದು. ಇದರಲ್ಲಿ ಅಧಿಷ್ಠಾನ, ಕಾರ್ಯಪದ್ಧತಿ ಹಾಗೂ ಕಾರ್ಯಕರ್ತ ಎಂದು ಮೂರು ಭಾಗಗಳಲ್ಲಿ ಚರ್ಚಿಸಲಾಗಿದೆ. ಈ ಮೂರು ಸಂಗತಿಗಳು ನಮಗೆ ತಿಳಿದಿರುವಂತವೇ. ಇವುಗಳ ಸಾಮಾನ್ಯ ಅರ್ಥವಂತೂ ಎಲ್ಲರಿಗೂ ತಿಳಿದಿದೆ. ಆದರೆ ಈ ಸರ್ವವಿದಿತ ಸಂಗತಿಗಳು ದತ್ತೋಪಂತರ ಪ್ರತಿಭಾಸ್ಪರ್ಶವಾಗುತ್ತಲೇ ಹೊಸ ಪ್ರಖರತೆ, ಹೊಸ ತೇಜಸ್ಸು ಹಾಗೂ ಹೊಸ ರೂಪಲಾವಣ್ಯಗಳಿಂದ ನಮ್ಮೆದುರು ಬರುತ್ತದೆ. -
Sahitya Sangama
ಗಾನಮಾಲಾ | Ganamala Songs Collections of RSS
₹100.00 Buy Nowಪುಸ್ತಕದ ಹೆಸರು: ಗಾನಮಾಲಾ
ಪ್ರಕಾಶಕರು: ಸಾಹಿತ್ಯ ಸಂಗಮ
ಅರ್ಚನಾ ಪುಸ್ತಕ ಸಂಪುಟದ 12 ಆವೃತ್ತಿಗಳಲ್ಲಿ ಪ್ರಕಟವಾದ ಎಲ್ಲಾ ಹಾಡುಗಳನ್ನು ಸೇರಿಸಿ ʼಗಾನಮಾಲಾʼ ಎಂಬ ಹೆಸರಿನ ಒಂದು ಬೃಹತ್ ಸಂಪುಟವನ್ನು ಹೊರತರಲಾಗಿದೆ. ಈ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ, ಉತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸುವ ಹಾಡುಗಳನ್ನಷ್ಟೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ 272 ಹಾಡುಗಳ ಸಂಗ್ರಹವಿದೆ.
-
Sahitya Sangama
ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು | Nirmalaya: Life and Legacy of N. Krishnappa
₹150.00 Buy Nowಪುಸ್ತಕದ ಹೆಸರು: ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು
ಲೇಖಕರು: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ
ಕೃಷ್ಣಪ್ಪನವರ ಜೀವನಗಾಥೆ ಬರೆಯುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅವರು ತಮ್ಮ ಬಗ್ಗೆ ಹೇಳಿಕೊಂಡಿರುವುದಾಗಲೀ ಬರೆದುಕೊಂಡಿರುವುದಾಗಲೀ ಹೆಚ್ಚೇನೂ ಸಿಗುವುದಿಲ್ಲವಾದ್ದರಿಂದ ಅದು ಕಷ್ಟ. ಆದರೆ ಅಕ್ಷರಶಃ ಸಾವಿರಾರು ಜನರೊಂದಿಗೆ ವ್ಯಕ್ತಿಗತವಾಗಿ ಪರಿಚಯ ಮಾತ್ರವಲ್ಲ, ಅವರ ಬದುಕುಗಳಲ್ಲೂ ವಿಶಿಷ್ಟ ಪಾತ್ರ ವಹಿಸಿದ್ದರಿಂದಾಗಿ ಆ ಎಲ್ಲ ಜನರೇ ಜೀವನಕಥೆಗೆ ಬೇಕಾದ ಸಾಮಗ್ರಿ ಒದಗಿಸುತ್ತಾರಾದ್ದರಿಂದ ಅದು ಸುಲಭವೂ ಹೌದು.



