ಜಿಹಾದ್ | ಸುಹಾಸ್ ಮಜುಮದಾರ್

Sale!

ಜಿಹಾದ್ | ಸುಹಾಸ್ ಮಜುಮದಾರ್

Original price was: ₹120.00.Current price is: ₹108.00.

ಇಂಗ್ಲಿಷ್ ಮೂಲ: ಸುಹಾಸ್ ಮಜುಮದಾರ್

ಕನ್ನಡಾನುವಾದ : ಗಿರಿಧರ    ಉದ್ಯಾವರ

ಪ್ರಕಾಶಕರು : ಸಾಹಿತ್ಯ ಸಿಂಧು ಪ್ರಕಾಶನ

“ಜಿಹಾದ್”ನ ಇಂಚಿಂಚನ್ನೂ ಈ ಕೃತಿಯಲ್ಲಿ ಲೇಖಕ ಸುಹಾಸ್ ಮಜುವದಾರರು ತಮ್ಮ ವಿದ್ವತ್ತಿನ ಸೂಕ್ಷ್ಮಾವಲೋಕನದ ಮೂಲಕ ಬಯಲಿಗೆಳೆದಿದ್ದಾರೆ. ಜಿಹಾದೀ ಸಿದ್ಧಾಂತದ ಮೇಲಿನ ಎಲ್ಲ ಬೂಟಾಟಿಕೆಯ ಮುಸುಕು ತೆಗೆದು, ಅದನ್ನು ಮೂಲರೂಪದಲ್ಲಿ ಚಿತ್ರಿಸಿದ್ದಾರೆ. ಚರಿತ್ರೆಯಲ್ಲಿ ಈವರೆಗೆ ಇಸ್ಲಾಮೀ ದಾಳಿಗೆ ತುತ್ತಾದ ನತದೃಷ್ಟ ದೇಶಗಳಿಂದ ಮೊದಲುಗೊಂಡು ಇಂದಿನ ಕಾಶ್ಮೀರದವರೆಗಿನ ಇತಿಹಾಸದ ಹಿನ್ನೆಲೆಯಲ್ಲಿ ಇಸ್ಲಾಮಿನ ರಕ್ತದಾಹವನ್ನು ತೆರೆದಿಟ್ಟಿದ್ದಾರೆ. ’ಜಿಹಾದ್ ಎಂಬುದು ಹಾಗಲ್ಲ ಹೀಗೆ’ ಎನ್ನುವವರ ಬಾಯನ್ನು ಇನ್ನೆಂದೂ ತೆರೆಯದಂತೆ ಮುಚ್ಚಿಸಿದ್ದಾರೆ.

ಭಾರತೀಯ ಆಧ್ಯಾತ್ಮಿಕ ನೆಲೆಯ ಹಿಂದೂ ಧರ್ಮ, ಇತಿಹಾಸಗಳನ್ನು ಕುರಿತು ನಿನ್ನಕ್ಷಪಾತವಾದ ಅಧ್ಯಯನದ ಬರಹದ ಕೊರತ ಸಾಕಷ್ಟು ಇದೆ. ಆದರೆ ಪರಕೀಯ ದಬ್ಬಾಳಿಕೆ. ಮಾನಸಿಕವಾಗಿ ಬದಲಾದ ಕಲ್ಪನೆಗಳು, ಪರಮತಗಳಿಂದ ಬಂದ (ಕ್ರೈಸ್ತ, ಇಸ್ಲಾಂ, ಮಾರ್ಕ್ಸ್ವಾದ) ಆಕ್ರಮಣಕಾರಿ ವಿಚಾರಧಾರೆಗೆ ಭಾರತದ ವೈಚಾರಿಕರು ಹೇಗೆ ಉತ್ತರ ಕೊಟ್ಟರು, ಯಾವ ರೀತಿ ಚಿಂತನೆ ನಡೆಸಿದರು ಎಂಬುದನ್ನು ಹುಡುಕಿದರೆ ಹೆಚ್ಚಿನ ಬೆಳಕು ಕಾಣುವುದಿಲ್ಲ.

ನಮ್ಮದಲ್ಲದ ಮತ, ಇತಿಹಾಸ, ವಿಚಾರ, ಸಿದ್ಧಾಂತಗಳನ್ನು ನಮ್ಮ ದೇಸೀಯ ನೆಲೆಗಟ್ಟಿನ ಮೇಲೆ ವಿಮರ್ಶಿಸಬೇಕು ಮತ್ತು ಜಗತ್ತಿನ ಶಾಂತಿ, ಸಹಬಾಳ್ವೆಯನ್ನು ರೂಢಿಗೊಳಿಸಬೇಕಾದರೆ ಅಸಹಿಷ್ಣು ರಾಜಕೀಯ ಚಿಂತನೆ, ಸಾಮ್ರಾಜ್ಯಶಾಹಿ ಧೋರಣೆಗಳನ್ನು ಕಟುವಾಗಿ, ನಿಷ್ಠುರವಾಗಿ, ಆದರೆ ಸಾಕ್ಷ್ಯಾಧಾರಗಳ ಸಮೇತ ಎದುರಿಸಬೇಕು. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ವಿಚಾರ ಸಾಹಿತ್ಯ ಸೃಷ್ಟಿಯಾಗಬೇಕು.

ಇದು ‘ವಾಯ್ಸ್ ಆಫ್ ಇಂಡಿಯಾ’ದ ಸಂಸ್ಥಾಪಕರಾದ ಶ್ರೀ ರಾಮಸ್ವರೂಪ್ ಮತ್ತು ಅವರ ಒಡನಾಡಿ ಶ್ರೀ ಸೀತಾರಾಮ ಗೋಯಲ್‌ರವರ ವಿಚಾರ ಧಾಟಿ.

ಸಮಕಾಲೀನ ಜೀವನವನ್ನು ಕಾಡುತ್ತಿರುವ ಜಾಗತಿಕ ಹಿಂಸೆ, ಭಯೋತ್ಪಾದನೆ, ಬೌದ್ಧಿಕ ದಬ್ಬಾಳಿಕೆಗಳನ್ನು ಎದುರಿಸುವ ವೈಚಾರಿಕ ಆಧಾರ, ತರ್ಕಗಳನ್ನು’ವಾಯ್ಸ್ ಆಫ್ ಇಂಡಿಯಾ’ ಕಟ್ಟಿಕೊಟ್ಟಿದೆ. ಅಂತಹ ಚಿಂತನೆಯನ್ನು ಹೊಸ ಸಹಸ್ರಮಾನದಲ್ಲಿ ಕನ್ನಡ ಚಿಂತನೆ ಅನುಸಂಧಾನ ಮಾಡುವ ಮೊದಲ ಕಟ್ಟು ಈ ಪುಸ್ತಕಗಳು.

ಸಾಮಾನ್ಯ ಮಾನವನ ಬುದ್ಧಿಗೆ ನಿಲುಕುವುದನ್ನು ವಿವರಿಸಲು ಅಷ್ಟೆಲ್ಲ ಪಾಂಡಿತ್ಯ, ಜಾಣ್ಮೆ ಬೇಕೆ? ಇಸ್ಲಾಮಿನ    ಅಪಾಯದ ಬಗ್ಗೆ ತಿಳಿಯಲು ಅಪಾರ ಬುದ್ಧಿವಂತಿಕೆಯ    ಅಗತ್ಯವಿಲ್ಲ. ಒಂದಿಷ್ಟು ವಿವೇಚನೆ ಹಾಗೂ ಸಹಜವಾದ ಅಂತಃಸಾಕ್ಷಿ- ನೈತಿಕ ಪ್ರಜ್ಞೆ ಇದ್ದರೆ, ಸಾಕೇ ಸಾಕು !

 

Reviews

There are no reviews yet.

Be the first to review “ಜಿಹಾದ್ | ಸುಹಾಸ್ ಮಜುಮದಾರ್”

Your email address will not be published. Required fields are marked *

Scroll to Top