ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮತ-ಧರ್ಮಗಳ ಸ್ವಾತಂತ್ರ್ಯ, ಮುಂತಾದವು ಬಹಳ ಅದ್ಭುತವಾದ ಸಾಮಾಜಿಕ-ರಾಜಕೀಯ ಪರಿಕಲ್ಪನೆ.ವಿದೇಶಿಯರ ಆಳ್ವಿಕೆಯ ಕಪ್ಪು-ಇತಿಹಾಸ ಮತ್ತು 1957ರ ತುರ್ತುಪರಿಸ್ಥಿತಿಗಳ ಆಮೂಲಾಗ್ರ ವಿಮರ್ಶ್ಮಾಕ ಅಧ್ಯಯನ ಹಾಗೂ ವಿಶ್ಲೇಷಣೆಗಳಿಂದ, ಈ ಸಂಪತ್ತುಗಳ – ಈ ಮೌಲ್ಯಗಳ ‘ಬೆಲೆ’ ತಿಳಿಯುತ್ತದೆ, ನಮ್ಮ ಬಹು-ಆಯಾಮಗಳ ಅರಿವಿಗೂ ಕಾರಣವಾಗುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿಯೇ ವಾಕ್ ಸ್ವಾತಂತ್ರ್ಯ- ಪತ್ರಿಕಾ ಸ್ವಾತಂತ್ರ್ಯ-ಲೇಖನ ಸ್ವಾತಂತ್ರ್ಯಗಳು ಮುಖ್ಯವಾಗುತ್ತವೆ.
ವಿದೇಶೀ ಆಳ್ವಿಕೆ ಮತ್ತು ತುರ್ತುಪರಿಸ್ಥಿತಿಗಳ ಅವಧಿಗಳ ಹೊರತಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿ ಸಿಲುಕುವುದು ನಿಜವಾಗಿಯೂ ಭಯಾನಕ. ಅಂತೆಯೇ, ಎಲ್ಲ ಬಗೆಯ ಸ್ವಾತಂತ್ರ್ಯಗಳು ನಮಗಿವೆ ಎಂಬ ಭ್ರಮೆಯಲ್ಲಿ, ಬಹುಪಾಲು ಜನ ನಾವೆಲ್ಲ ತೇಲಾಡುವುದು ಇನ್ನಷ್ಟು ಭಯಾನಕ. ಇಂತಹ ಆಘಾತಕಾರಿ ವಿಚಾರಗಳನ್ನು-ದಾಖಲೆಗಳನ್ನು ಸೀತಾರಾಮ ಗೋಯಲ್ ಅವರ “Freedom of Expression’ ನಮ್ಮ ಮುಂದೆ ಅನಾವರಣಗೊಳಿಸುತ್ತದೆ.





Reviews
There are no reviews yet.