ಆದಿಕವಿ ವಾಲ್ಮೀಕಿಯ ಕಥನಶೈಲಿ | ಎಲ್ ವಿ ಶಾಂತಕುಮಾರಿ

Sale!

ಆದಿಕವಿ ವಾಲ್ಮೀಕಿಯ ಕಥನಶೈಲಿ | ಎಲ್ ವಿ ಶಾಂತಕುಮಾರಿ

Original price was: ₹160.00.Current price is: ₹135.00.

ಸಾಹಿತ್ಯ ಜಗತ್ತಿನ  ಆದಿಕಾವ್ಯ ರಾಮಾಯಣ; ವಾಲ್ಮೀಕಿ ಆದಿಕವಿ. ರಾಮಾಯಣ ರಚನೆಯಾದ ಕಾಲ ಯಾವುದು?- ಎನ್ನುವ ವಿಷಯದಲ್ಲಿ ಈಗಲೂ ವಿದ್ವಾಂಸರಲ್ಲಿ ಸಹಮತವಿಲ್ಲ.   ಅಷ್ಟಕ್ಕೂ ಅದು ಕಾವ್ಯವೇ,ಇತಿಹಾಸವೇ? – ಎಂಬುದೂ ಇಂದಿಗೂ ಚರ್ಚಾಸ್ಪದ ಸಂಗತಿ. ಆದರೆ ಈ ರೀತಿಯ ಚರ್ಚೆ, ವಾದ-ವಿವಾದಗಳ ನಡುವೆಯೂ ‘ರಾಮಾಯಣ’ ಮಾತ್ರ ‘ವರ್ತಮಾನ ಕಥನ’ವೆನಿಸುವಷ್ಟು ಚಿರನೂತನ.

ಕಥೆಯಲ್ಲಿಯ ಅನೂಹ್ಯ ತಿರುವುಗಳು, ವಿಭಿನ್ನ ಸಂಸ್ಕೃತಿ-ಸಭ್ಯತೆ-ಸದಾಚಾರಗಳ ಮುಖಾಮುಖಿ, ಅನೇಕ ವಿಧದ ಕೌಟುಂಬಿಕ ವಾತಾವರಣ ಚಿತ್ರಣ,- ಮೊದಲಾದ ಹಲವು ಕಾರಣಗಳಿಂದಾಗಿ ‘ರಾಮಾಯಣ’ ಓದುಗನ ಮನಸ್ಸನ್ನು ಹಿಡಿದಿಡುತ್ತದೆ; ಓದುಗನನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಡುತ್ತದೆ. ಈ ಕಾರಣದಿಂದಾಗಿಯೇ ಭಾರತೀಯರ ಜೀವನವನ್ನು ರಾಮಾಯಣದ ಸನ್ನಿವೇಶಗಳು-ಪಾತ್ರಗಳ ಉಲ್ಲೇಖ ನಮ್ಮ ದೈನಂದಿನ ಜೀವನದಲ್ಲೂ ಮತ್ತೆ ಮತ್ತೆ ಕಾಣ ಸಿಗುತ್ತದೆ.

ಇಂಥದ್ದೊಂದು ಅಪೂರ್ವ ಕಾವ್ಯವನ್ನು ಕಟ್ಟಿದ  ಆದಿಕವಿ, ಕೃತಿರಚನೆಯಲ್ಲಿ ಅನುಸರಿಸಿದ ತಂತ್ರ   ಎಂಥದ್ದು? ಆದಿಕವಿಯ ಕಥನಶೈಲಿ ಹೇಗೆ ರಮ್ಯವೂ ರೋಚಕವೂ ಆದದ್ದು?- ಎಂಬುದರ     ಅವಲೋಕನವೇ “ಆದಿಕವಿ ವಾಲ್ಮೀಕಿಯ ಕಥನಶೈಲಿ”

Reviews

There are no reviews yet.

Be the first to review “ಆದಿಕವಿ ವಾಲ್ಮೀಕಿಯ ಕಥನಶೈಲಿ | ಎಲ್ ವಿ ಶಾಂತಕುಮಾರಿ”

Your email address will not be published. Required fields are marked *

Scroll to Top