ಇಸ್ರೇಲ್ ಜಗತ್ತಿನ ಅಪರೂಪದ ದೇಶ. ಜಗತ್ತಿನೆಲ್ಲೆಡೆ ಹರಿದು ಹಂಚಿ ಹೋಗಿದ್ದ ಯಹೂದಿಗಳು ಅವಿರತ ಹೋರಾಟದಿಂದ ತಾಯ್ನೆಲವನ್ನು ತಮ್ಮದಾಗಿಸಿಕೊಂಡರು. ದಕ್ಕಿದ ತಾಯ್ನೆಲವನ್ನು ಎಲ್ಲ ವೈರುದ್ಧ್ಯಗಳ ನಡುವೆಯೂ ಜಗತ್ತಿನಲ್ಲಿ ಸ್ವಾಭಿಮಾನದ ಮೇರು ಸಂಕೇತವನ್ನಾಗಿ ರೂಪಿಸಿದರು.
ಅಂತಹ ಇಸ್ರೇಲ್ ನ ಸ್ವಾತಂತ್ರ್ಯ ಹೋರಾಟದಲ್ಲಿ 1918 ರ ‘ಹೈಫಾ’ ನಗರ ವಶವಾದದ್ದು ಮಹತ್ವದ ತಿರುವು. ಆ ಹೋರಾಟದ ಪುಟಗಳಲ್ಲಿ ಕನ್ನಡದ ನೆಲದ ಮೈಸೂರು ಸಂಸ್ಥಾನದ ಸೈನಿಕರ ಶೌರ್ಯ, ಸಾಹಸಗಳೂ ಮೇಳೈಸಿವೆ. ಈ ಹೊತ್ತಿಗೆ ಶತಮಾನದ ಹೊಸ್ತಿಲಿನಲ್ಲಿರುವ ಆ ಹೋರಾಟದ ದಾಖಲಾಗದ ಪುಟಗಳನ್ನು ತೆರೆದಿಡುತ್ತಿದೆ.
ಇದೀಗ ಭಾರತ- ಇಸ್ರೇಲ್ ನ ರಾಜತಾಂತ್ರಿಕ ಸಂಬಂಧಗಳು ಗಟ್ಟಿಗೊಳ್ಳುತ್ತಿರುವ ಹೊತ್ತಿನಲ್ಲಿ ಈ ಪುಸ್ತಕ ಮತ್ತಷ್ಟು ಮಹತ್ವ ಕಂಡುಕೊಳ್ಳುತ್ತದೆ.





Reviews
There are no reviews yet.