ಬೇರೆಯವರಿಂದ ಮನ್ನಣೆಯನ್ನಾಗಲಿ ಪದವಿಗೌರವವನ್ನಾಗಲಿ ಎದುರುನೋಡದೆ ಸದಾ ಲೋಕಹಿತಕ್ಕಾಗಿ ಶ್ರಮಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡ ಹಲವರು ಇರುತ್ತಾರೆ. ಇತರರಿಗೆ ಶೀತಲತೆಯನ್ನು ನೀಡುವುದಕ್ಕಾಗಿಯೆ ಬಾಳುವ ಚಂದನತರುವಿನಂತಹ ಮನೋವೃತ್ತಿಯ ಇಂತಹ ಸಜ್ಜನರನ್ನು “ರತ್ನದೀಪಗಳೆಂದು ಕವಿಗಳು ವರ್ಣಿಸಿದ್ದಾರೆ.
ನಮ್ಮ ನಡುವೆಯೇ ಇದ್ದು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಸಮುನ್ನತರೆನಿಸಿ ಸುತ್ತಲೂ ಕಾಂತಿಯನ್ನು ಪಸರಿಸಿ ಧನ್ಯತೆ ಪಡೆದ ಹಲವರ ವ್ಯಕ್ತಿಚಿತ್ರಣಗಳು ಈ ಸಂಕಲದಲ್ಲಿವೆ. ವಿದ್ವತ್ತಿನ ಕ್ಷೇತ್ರದಲ್ಲಿ ಮೇರುಸದೃಶರಾದ ಎನ್ ರಂಗನಾಥಶರ್ಮ ಮತ್ತು ಎಸ್. ಕೆ ರಾಮಚಂದ್ರರಾವ್, ಆಧ್ಯಾತ್ಮವಿದ್ಯಾಪ್ರಸಾರಕ ವೇದಾಂತ ಸುಬ್ಬಯ್ಯ, ಜೋಳಿಗೆ ಮಾತ್ರದ ಆಸರೆಯಿಂದ ಸೇವಸಾಮ್ರಾಜ್ಯ ನಿರ್ಮಿಸಿದ ಬೆಳೆಗೆರೆ ಕೃಷ್ಣಶಾಸ್ತ್ರೀ, ಸಂಗೀತಕಲಾಪ್ರವರ್ತನೆಯ ಮೂಲಕ ನಾಡಿನ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದ ಎಸ್ ವಿ ನಾರಾಯಣಸ್ವಾಮಿರಾವ್, ಜನಸೇವಕಾಗ್ರಣಿ ಟಿ ಆರ್ ಶಾಮಣ್ಣ, ಗ್ರಂಥಾಲಯವಿಜ್ಞಾನ ಪಿತಾಮಹ ಎಸ್ ಆರ್ ರಂಗನಾಥನ್- ಈ ಏಳು ಮಂದಿ ಅಸಾಮಾನ್ಯ ಸಾಧಕರ ವ್ಯಕ್ತಿಸ್ಮರಣ ಮಾಲಿಕೆ “ದೀಪ್ತಶೃಂಗಗಳು”





Reviews
There are no reviews yet.