ದೀಪ್ತಿಮಂತರು | ಎಸ್. ಆರ್. ರಾಮಸ್ವಾಮಿ

Sale!

ದೀಪ್ತಿಮಂತರು | ಎಸ್. ಆರ್. ರಾಮಸ್ವಾಮಿ

Original price was: ₹100.00.Current price is: ₹90.00.

ಪತ್ರಿಕೋದ್ಯಮ, ಪಾರಂಪರಿಕ ಶಾಸ್ತ್ರಾಧ್ಯಯನ, ಸಮಾಜಜಾಗೃತಿ, ಸಂಗೀತ, ನೃತ್ಯ ಮೊದಲಾದ ಕ್ಷೇತ್ರಗಳನ್ನು ಪ್ರಜ್ವಲಗೊಳಿಸಿದ ಹಲವರು ಹಿಂದಿನ ಪೀಳಿಗೆಯ ಅಸಾಮಾನ್ಯ ಮಹನೀಯರ ಉನ್ನತ ಸಾಧನೆಗಳ ಸ್ಮರಣೆಯನ್ನು ಈಗಿನ ಮತ್ತು ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರಯತ್ನವನ್ನು ಈ ಗ್ರಂಥದಲ್ಲಿನ ಪ್ರಬಂಧಗಳಲ್ಲಿ ಕಾಣಬಹುದು.

ಸಮಾಜಾಭ್ಯುದಯಕ್ಕಾಗಿ ಧ್ಯೇಯೋನ್ಮುಖರಾಗಿ ಅವಿರತವಾಗಿ ಶ್ರಮಿಸಿ ಹೆಜ್ಜೆಗುರುತುಗಳನ್ನು ಉಳಿಸಿಹೋದ ವರು ಈ ಸಾಧಕರು. ಪ್ರತಿಕೂಲ ಪರಿಸರವನ್ನು ಲೆಕ್ಕಿಸದೆ ಅನನ್ಯ ಸಾಧನೆ ಮಾಡಿದ ಇಂತಹವರ ಸ್ಮರಣೆ ಅಭ್ಯುದಾಯಸಕ್ತಿಗೆ ಸದಾ ಸ್ಫೂರ್ತಿಪ್ರದವಾಗಿರುತ್ತದೆ.

ವರ್ಷಗಳು ಕಳೆದಂತೆ ಇಂತಹ ಶ್ರೇಷ್ಠರ ಪ್ರಯಾಸಗಳು ವಿಸ್ಮರಣೆಗೊಳಗಾಗುವ ಸಂಭವವಿರುವುದಿಂದ ಅವರ ಜೀವನವೃತ್ತಗಳನ್ನು ಸ್ವಲ್ಪ ಮಟ್ಟಿಗಾದರೂ ದಾಖಲೆ ಮಾಡಿಡುವ ಅಗತ್ಯವಿದೆ. ಈ ಆಶಯದಿಂದ ಮೂಡಿರುವ, ಸ್ವತಃ ಲೇಖಕರ ದೀರ್ಘಕಾಲದ ಒಡನಾಟ ಹೊಂದಿರುವ ಆರು ವ್ಯಕ್ತಿಚಿತ್ರಣಗಳ ಸಂಕಲನ – ’ದೀಪ್ತಿಮಂತರು’.

Reviews

There are no reviews yet.

Be the first to review “ದೀಪ್ತಿಮಂತರು | ಎಸ್. ಆರ್. ರಾಮಸ್ವಾಮಿ”

Your email address will not be published. Required fields are marked *

Scroll to Top