ಪ್ರಸ್ತುತ ಕೃತಿ ‘ಗೀತಾಂತರಂಗ’, ಪೂಜ್ಯ ಶಂಕರಾಚಾರ್ಯರು ಭಗವದ್ಗೀತೆಯನ್ನು ಕುರಿತು ನಡೆಸಿದ ಚಿಂತನ-ಮಂಥನದ ಫಲವಾಗಿದ್ದು, ಭಗವದ್ಗೀತೆಯು ಮುಖ್ಯವಾಗಿ ಏನನ್ನು ಹೇಳಲು ಹೊರಟಿದೆ ಮತ್ತು ಯಾರನ್ನು ಉದ್ದೇಶಿಸಿದೆ – ಎಂಬುದನ್ನು ಕುರಿತು ವಿಸ್ತ್ರತ ವಿಚಾರ-ವಿಮರ್ಶೆಗೆ ಮೀಸಲಾಗಿದೆ. ಈ ಕೃತಿ ಬರೆಯಲ್ಪಟ್ಟ ಸಂದರ್ಭದಲ್ಲಿ (೧೯೧೪-೧೫ರ ಸುಮಾರಿನಲ್ಲಿ) ವಿಷಯದ ಕಾರಣಕ್ಕಷ್ಟೇ ಅಲ್ಲದೆ, ಅದು ಬರೆಯಲ್ಪಟ್ಟ ಭಾಷೆಯ ಕಾರಣದಿಂದಾಗಿಯೂ ದೇಶವಿದೇಶಗಳಲ್ಲಿ ಗಮನ ಸೆಳೆದಿತ್ತು. ಕಾರಣವಿಷ್ಟೆ: ಅಂದು ಭಾರತೀಯ ಸಾಂಪ್ರದಾಯಿಕ ವಿದ್ವಾಂಸರು ಶಾಸ್ತ್ರವಿಷಯಗಳು ಸಂಸ್ಕೃತದಲ್ಲಿ, ಹೆಚ್ಚೆಂದರೆ ಭಾರತೀಯ ಭಾಷೆಗಳಲ್ಲಿ ಮಾತ್ರ ಬರೆಯಲ್ಪಡಬೇಕು. ಚರ್ಚಿಸಲ್ಪಡಬೇಕು ಎಂದು ಅಪೇಕ್ಷಿಸುತ್ತಿದ್ದರು. ಇಂಗ್ಲಿಷಿನಂತಹ ‘ವಿದೇಶೀ ಭಾಷೆ’ಯಲ್ಲಿ ಶಾಸ್ತ್ರವಿಷಯಗಳು ಪ್ರಕಟವಾಗುವುದು ಅಂದಿನ ಸಾಮಾಜಿಕ-ಸಾಂಸ್ಕೃತಿಕ ಪರಿಸರದಲ್ಲಿ ಸ್ವೀಕಾರಾರ್ಹವಾಗಿರಲಿಲ್ಲ. ಹಾಗಿರುವಾಗ, ಶಂಕರಾಚಾರ್ಯರೊಬ್ಬರು ಆಂಗ್ಲಭಾಷೆಯಲ್ಲಿ ಭಗವದ್ಗೀತೆಯನ್ನು ಕುರಿತು ಬರೆದದ್ದು ಕ್ರಾಂತಿಕಾರಕವೆನಿಸಿತ್ತು ಅಕ್ಕ ಸಂದರ್ಭದಲ್ಲಿ(೧೯೧೬) ವಾಷಿಂಗ್ಟನ್ನಿನ ಓರಿಯಂಟಲ್ ಯೂನಿವರ್ಸಿಟಿ’ಯವರು ಈ (‘The Heart of The Bhagavad Gita’) ‘ক’ তাদের ಮಾಡಿದರು. ಅನಂತರ ೧೯೧೮ರಲ್ಲಿ ಇದು ಪುಸ್ತಕರೂಪದಲ್ಲಿ ಪ್ರಕಟವಾಯಿತು. ದೇಶದಾದ್ಯಂತ ವಿದ್ವದ್ ವಲಯದಲ್ಲಿ ಈ ಕೃತಿ ಮನ್ನಣೆಯನ್ನೂ ಗಳಿಸಿತು. ೧೯೨೧ರಲ್ಲಿ ಡಿವಿಜಿಯವರು ತಾವು ನಡೆಸುತ್ತಿದ್ದ ‘ದಿ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್’ ಮಾಸಪತ್ರಿಕೆಯಲ್ಲಿ ಈ ಕೃತಿಯನ್ನು ಕುರಿತು ವಿಮರ್ಶಾಲೇಖನವನ್ನು ಬರೆದು ಪ್ರಕಟಿಸಿದ್ದರು.
ಹೀಗೆ ಹಲವು ಕಾರಣಗಳಿಂದಾಗಿ ಮಹತ್ತ್ವದ್ದೆನಿಸಿದ್ದ ಈ ಕೃತಿ ಈಗ ‘ಗೀತಾಂತರಂಗ’ ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗುತ್ತಿದೆ.
’ಮಹಾಭಾಗವತ’ ಡಾ|| ಕುರ್ತಕೋಟಿ ಶಂಕರಾಚಾರ್ಯರ ಈ ಗ್ರಂಥವು ಸನಾತನ ಸಂಸ್ಕೃತಿಯು ಎತ್ತಿಹಿಡಿಯುವ ಜೀವನಪದ್ದತಿಯ ಸರಳವೂ ವಿಶ್ವಸನೀಯವೂ ಆದ ಮಾರ್ಗದರ್ಶಿ. ಇದು ಎಲ್ಲ ಬಗೆಯ ಜನರಿಗೂ ಉಪಾದೇಯವಾಗಬಲ್ಲುದು.
—-ಡಿ ವಿ ಜಿ





Reviews
There are no reviews yet.