ಇಸ್ಲಾಂ ಆಕ್ರಾಂತ-ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್

Sale!

ಇಸ್ಲಾಂ ಆಕ್ರಾಂತ-ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್

Original price was: ₹110.00.Current price is: ₹99.00.

ಆಂಗ್ಲ ಮೂಲ- ಸೀತಾರಾಮ ಗೋಯಲ್

ಕನ್ನಡಾನುವಾದ-  ಎಚ್ ಮಂಜುನಾಥ ಭಟ್

‍ಪ್ರಕಾಶನ- ಸಾಹಿತ್ಯ ಸಿಂಧು ಪ್ರಕಾಶನ

ಭಾರತೀಯ ಆಧ್ಯಾತ್ಮಿಕ ನೆಲೆಯ ಹಿಂದೂ ಧರ್ಮ, ಇತಿಹಾಸಗಳನ್ನು ಕುರಿತು ನಿಷ್ಪಕ್ಷಪಾತವಾದ ಅಧ್ಯಯನದ ಬರಹದ ಕೊರತೆ ಸಾಕಷ್ಟು ಇದೆ. ಆದರೆ ಪರಕೀಯ ದಬ್ಬಾಳಿಕೆ. ಮಾನಸಿಕವಾಗಿ ಬದಲಾದ ಕಲ್ಪನೆಗಳು. ಪರಮತಗಳಿಂದ ಬಂದ (ಕ್ರೈಸ್ತ, ಇಸ್ಲಾಂ, ಮಾರ್ಕ್ಸ್ವಾದ) ಆಕ್ರಮಣಕಾರಿ ವಿಚಾರಧಾರೆಗೆ ಭಾರತದ ವೈಚಾರಿಕರು ಹೇಗೆ ಉತ್ತರ ಕೊಟ್ಟರು. ಯಾವ ರೀತಿ ಚಿಂತನೆ ನಡೆಸಿದರು ಎಂಬುದನ್ನು ಹುಡುಕಿದರೆ ಹೆಚ್ಚಿನ ಬೆಳಕು ಕಾಣುವುದಿಲ್ಲ.

ನಮ್ಮದಲ್ಲದ ಮತ, ಇತಿಹಾಸ, ವಿಚಾರ, ಸಿದ್ಧಾಂತಗಳನ್ನು ನಮ್ಮ ದೇಸೀಯ ನೆಲೆಗಟ್ಟಿನ ಮೇಲೆ ವಿಮರ್ಶಿಸಬೇಕು ಮತ್ತು ಜಗತ್ತಿನ ಶಾಂತಿ, ಸಹಬಾಳ್ವೆಯನ್ನು ರೂಢಿಗೊಳಿಸಬೇಕಾದರೆ ಅಸಹಿಷ್ಣು ರಾಜಕೀಯ ಚಿಂತನೆ, ಸಾಮ್ರಾಜ್ಯಶಾಹಿ ಧೋರಣೆಗಳನ್ನು ಕಟುವಾಗಿ, ನಿಷ್ಠುರವಾಗಿ, ಆದರೆ ಸಾಕ್ಷ್ಯಾಧಾರಗಳ ಸಮೇತ ಎದುರಿಸಬೇಕು.

ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ವಿಚಾರ ಸಾಹಿತ್ಯ ಸೃಷ್ಟಿಯಾಗಬೇಕು.

ಇದು ‘ವಾಯ್ಸ್ ಆಫ್ ಇಂಡಿಯಾ’ದ ಸಂಸ್ಥಾಪಕರಾದ ಶ್ರೀ ರಾಮಸ್ವರೂಪ್ ಮತ್ತು ಅವರ ಒಡನಾಡಿ ಶ್ರೀ ಸೀತಾರಾಮ ಗೋಯಲ್‌ರವರ ವಿಚಾರ ಧಾಟಿ.

ಸಮಕಾಲೀನ ಜೀವನವನ್ನು ಕಾಡುತ್ತಿರುವ ಜಾಗತಿಕ ಹಿಂಸೆ, ಭಯೋತ್ಪಾದನೆ, ಬೌದ್ಧಿಕ ದಬ್ಬಾಳಿಕೆಗಳನ್ನು ಎದುರಿಸುವ ವೈಚಾರಿಕ ಆಧಾರ, ತರ್ಕಗಳನ್ನು ವಾಯ್ಸ್ ಆಫ್ ಇಂಡಿಯಾ’ ಕಟ್ಟಿಕೊಟ್ಟಿದೆ. ಅಂತಹ ಚಿಂತನೆಯನ್ನು ಹೊಸ ಸಹಸ್ರಮಾನದಲ್ಲಿ ಕನ್ನಡ ಚಿಂತನೆ ಅನುಸಂಧಾನ ಮಾಡುವ ಮೊದಲ ಕಟ್ಟು ಈ ಪುಸ್ತಕಗಳು.

Reviews

There are no reviews yet.

Be the first to review “ಇಸ್ಲಾಂ ಆಕ್ರಾಂತ-ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್”

Your email address will not be published. Required fields are marked *

Scroll to Top