ಕಾರ್ಯಕರ್ತ | ದತ್ತೋಪಂತ ಠೇಂಗಡಿ

ಕಾರ್ಯಕರ್ತ | ದತ್ತೋಪಂತ ಠೇಂಗಡಿ

120.00

ಪುಸ್ತಕದ ಹೆಸರು: ಕಾರ್ಯಕರ್ತ
ಲೇಖಕರು: ದತ್ತೋಪಂತ ಠೇಂಗಡಿ
ಪ್ರಕಾಶಕರು: ಸಾಹಿತ್ಯ ಸಂಗಮ
ಈ ಪುಸ್ತಕದಲ್ಲಿನ ವಿಚಾರ ಸಂಪತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕುರಿತಾದದ್ದು. ಇದರಲ್ಲಿ ಅಧಿಷ್ಠಾನ, ಕಾರ್ಯಪದ್ಧತಿ ಹಾಗೂ ಕಾರ್ಯಕರ್ತ ಎಂದು ಮೂರು ಭಾಗಗಳಲ್ಲಿ ಚರ್ಚಿಸಲಾಗಿದೆ. ಈ ಮೂರು ಸಂಗತಿಗಳು ನಮಗೆ ತಿಳಿದಿರುವಂತವೇ. ಇವುಗಳ ಸಾಮಾನ್ಯ ಅರ್ಥವಂತೂ ಎಲ್ಲರಿಗೂ ತಿಳಿದಿದೆ. ಆದರೆ ಈ ಸರ್ವವಿದಿತ ಸಂಗತಿಗಳು ದತ್ತೋಪಂತರ ಪ್ರತಿಭಾಸ್ಪರ್ಶವಾಗುತ್ತಲೇ ಹೊಸ ಪ್ರಖರತೆ, ಹೊಸ ತೇಜಸ್ಸು ಹಾಗೂ ಹೊಸ ರೂಪಲಾವಣ್ಯಗಳಿಂದ ನಮ್ಮೆದುರು ಬರುತ್ತದೆ.

ಕಾರ್ಯಕರ್ತ ಪುಸ್ತಕದಲ್ಲಿ ಸಂಕಲಿತವಾಗಿರುವ ವಿಚಾರದ ಕೇಂದ್ರಬಿಂದುವಾಗಿರುವವನು ʼರಾಷ್ಟ್ರೀಯ ಸ್ವಯಂಸೇವಕ ಸಂಘʼದ ಕಾರ್ಯಕರ್ತ. ಆದರೆ ಅವನು ಅರಳುವುದು ನಮ್ಮ ಕೆಲಸದ ಅಧಿಷ್ಠಾನದಿಂದ ಪ್ರೇರಣೆ ಪಡೆದು ಮತ್ತು ಕಾರ್ಯಪದ್ಧತಿಯ ಬಿಗಿಯಾದ ಅನುಶಾಸನದಿಂದ ತೀಡಲ್ಪಡುವ ಮೂಲಕ. ಮುಂದೆ ಅದೇ ಕಾರ್ಯಪದ್ಧತಿಯಲ್ಲಿ ಶಕ್ತಿ ತುಂಬಿ ಗುರಿಪ್ರಾಪ್ತಿಯ ಉದ್ದೇಶಸಹಿತ ಅವನು ಮುನ್ನಡೆಯುತ್ತಾನೆ. ಇದನ್ನು ಲಕ್ಷ್ಯದಲ್ಲಿರಿಸಿ ʼಅಧಿಷ್ಠಾನʼ ಮತ್ತು ʼಕಾರ್ಯಪದ್ಧತಿʼ ಎಂಬ ಎರಡು ವಿಷಯಸೂತ್ರಗಳ ಜತೆ ಕಾರ್ಯಕರ್ತ ಎಂಬ ವಿಷಯವನ್ನೂ ಇಲ್ಲಿ ಸಮಗ್ರವಾಗಿ ಸಂಕಲಿತಗೊಳಿಸಲಾಗಿದೆ.
ಈ ಪುಸ್ತಕದಲ್ಲಿನ ವಿಚಾರ ಸಂಪತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕುರಿತಾದದ್ದು. ಇದರಲ್ಲಿ ಅಧಿಷ್ಠಾನ, ಕಾರ್ಯಪದ್ಧತಿ ಹಾಗೂ ಕಾರ್ಯಕರ್ತ ಎಂದು ಮೂರು ಭಾಗಗಳಲ್ಲಿ ಚರ್ಚಿಸಲಾಗಿದೆ. ಈ ಮೂರು ಸಂಗತಿಗಳು ನಮಗೆ ತಿಳಿದಿರುವಂತವೇ. ಇವುಗಳ ಸಾಮಾನ್ಯ ಅರ್ಥವಂತೂ ಎಲ್ಲರಿಗೂ ತಿಳಿದಿದೆ. ಆದರೆ ಈ ಸರ್ವವಿದಿತ ಸಂಗತಿಗಳು ದತ್ತೋಪಂತರ ಪ್ರತಿಭಾಸ್ಪರ್ಶವಾಗುತ್ತಲೇ ಹೊಸ ಪ್ರಖರತೆ, ಹೊಸ ತೇಜಸ್ಸು ಹಾಗೂ ಹೊಸ ರೂಪಲಾವಣ್ಯಗಳಿಂದ ನಮ್ಮೆದುರು ಬರುತ್ತದೆ.
ಕಬ್ಬಿಣವನ್ನು ಹೊನ್ನಾಗಿಸುವ ಅವರ ಪ್ರತಿಭೆ ಅಭಿಜಾತವಾದುದು. ಅವರ ಆಳವಾದ ಅಧ್ಯಯನ, ಪ್ರಗಾಢ ಚಿಂತನೆಯಿಂದ ಇದು ಅಲಂಕೃತವಾಗಿದೆ. ಪ್ರತ್ಯಕ್ಷ ಅನುಭವದಿಂದ ಪಡೆದ ಮೌಲಿಕಜ್ಞಾನದಿಂದ ತುಂಬಿ ತುಳುಕುತ್ತಿರುವ ಈ ಇಡೀ ಪುಸ್ತಕ ಒಂದು ಉಪನಿಷತ್ತಿನ ರೀತಿ ಇದೆ.

Reviews

There are no reviews yet.

Be the first to review “ಕಾರ್ಯಕರ್ತ | ದತ್ತೋಪಂತ ಠೇಂಗಡಿ”

Your email address will not be published. Required fields are marked *

Scroll to Top