ಭಾರತದ ಇತಿಹಾಸದಲ್ಲಿ ದಲಿತ ಸಮುದಾಯದ ಮೇಲೆ ನಡೆದ ದಬ್ಬಾಳಿಕೆ, ಕೋಮು ಘರ್ಷಣೆಗಳು ಮತ್ತು ಅನ್ಯಾಯಗಳ ಕುರಿತು ದಾಖಲೆಗಳೊಂದಿಗೆ ವಿವರಿಸುತ್ತದೆ. ಈ ಕೃತಿಯು ವಿಶೇಷವಾಗಿ ವಿಭಜನೆಯ ನಂತರದ ಕೋಮು ವರ್ಣದಲ್ಲಿ ನಡೆದ ಅನ್ಯಾಯಗಳನ್ನು ದಾಖಲಿಸುತ್ತದೆ. ಭಾರತದ ಇತಿಹಾಸದಲ್ಲಿ ಮುಚ್ಚಿಡಲಾಗಿದ್ದ ದಲಿತ ಸಮುದಾಯದ ಕಥೆಯನ್ನು ತೆರೆದಿಡುವುದು.
ಜನಸಾಮಾನ್ಯರಲ್ಲಿ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಸೃಷ್ಟಿಸುವುದು ಈಗಿನ ಪ್ರಮುಖ ಅವಶ್ಯಕತೆಯಾಗಿದೆ. ನಾನೊಬ್ಬ ಹಿಂದೂ, ಮಹಮ್ಮದೀಯ ಅಥವಾ ಸಿಂಧಿ,ಕನ್ನಡಿಗ ಎಂಬ ಭಾವನೆಗಳನ್ನು ಎರಡನೆಯದಾಗಿ ಇಟ್ಟುಕೊಂಡು, ಮೊದಲಿಗೆ ನಾವು ಭಾರತೀಯರು ಮತ್ತು ಕಟ್ಟಕಡೆಯದಾಗಿಯೂ ನಾವು ಭಾರತೀಯರು ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಈ ಪ್ರಜ್ಞೆ ಜಾಗೃತವಾದರೆ ಪ್ರಾದೇಶಿಕವಾದ ಮತ್ತು ಜಾತಿವಾದಗಳನ್ನು ಪೋಷಿಸಬಾರದು ಎನ್ನುವುದರ ಅರಿವಾಗುತ್ತದೆ.
-ಅಂಬೇಡ್ಕರ್
ವಿಭಜನೆಯ ನಂತರ ಪಾಕಿಸ್ಥಾನದ ಪಂಜಾಬಿನಲ್ಲಿ ಒಂದು ಲಕ್ಷದಷ್ಟು ದಲಿತರಿದ್ದರು. ಈಗ ಅವರೆಲ್ಲರನ್ನೂ ಇಸ್ಲಾಮಿಗೆ ಮತಾಂತರಿಸಲಾಗಿದೆ. ಮುಸ್ಲಿಮರಿಂದ ಅಪಹರಣವಾದ ಡಜನ್ನಿಗೂ ಹೆಚ್ಚು ದಲಿತ ಹೆಣ್ಣು ಮಕ್ಕಳಲ್ಲಿ 4 ಜನ ಮಾತ್ರ ಪತ್ತೆಯಾಗಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಪದೇ ಪದೇ ಮನವಿ ಪತ್ರ ಕಳಿಸಲಾಗುತ್ತಿದೆ. ಕಡೆಯ ಬಾರಿ ಪಾಕಿಸ್ತಾನಿ ಸರ್ಕಾರದ ನಿಯೋಜಿತ ಅಧಿಕಾರಿಯಿಂದ ಬಂದ ಉತ್ತರವೇನು ಗೊತ್ತೇ?
“ನನ್ನ ಅಧಿಕಾರವಿರುವುದು ಹಿಂದೂ ಮಕ್ಕಳ ಪತ್ತೆಗಾಗಿ… ದಲಿತರ ಹೆಣ್ಣು ಮಕ್ಕಳು ಹಿಂದೂಗಳಲ್ಲ” ಎಂದು! ಸಿಂಧ್, ಲಾಹೋರಿನಲ್ಲಿ ಬದುಕುತ್ತಿರುವ ಬೆರಳೆಣಿಕೆಯಷ್ಟು ಹಿಂದೂಗಳ ಪರಿಸ್ಥಿತಿ ಹೇಳುವಂತೇಯೇ ಇಲ್ಲ ಎಂದು ಮಹಾಪ್ರಾಣ ಜೋಗೇಂದ್ರನಾಥ್ ಮಂಡಲ್ ಅವರು ತಮ್ಮ ರಾಜೀನಾಮ ಪತ್ರದಲ್ಲಿ ಬರೆದಿದ್ದಾರೆ. ಈ ಪುಸ್ತಕವು ದಲಿತರ ನಿಜವಾದ ಜೀವನವನ್ನು ಓದುಗನ ಮುಂದೆ ತೆರೆದಿಡುತ್ತದೆ.





Reviews
There are no reviews yet.