ಮುಸ್ಲಿಂ ಪ್ರತ್ಯೇಕತಾವಾದ | ಸೀತಾರಾಮ ಗೋಯಲ್

Sale!

ಮುಸ್ಲಿಂ ಪ್ರತ್ಯೇಕತಾವಾದ | ಸೀತಾರಾಮ ಗೋಯಲ್

Original price was: ₹150.00.Current price is: ₹135.00.

ಮೂಲ : ಸೀತಾರಾಮ ಗೋಯಲ್

ಕನ್ನಡಾನುವಾದ :  ಎಚ್ ಮಂಜುನಾಥ ಭಟ್

ಪ್ರಕಾಶನ : ಸಾಹಿತ್ಯ ಸಿಂಧು ಪ್ರಕಾಶನ

ಬ್ರಿಟಿಷರು ಭಾರತವನ್ನು ಆಕ್ರಮಿಸಿದ ನಂತರ ನಮ್ಮ ಇತಿಹಾಸವನ್ನು ಮಾತ್ರವಲ್ಲ, ಸಾಹಿತ್ಯ, ಸಂಸ್ಕೃತಿ, ಸಮಾಜ, ನೀತಿ ರೀತಿ ಮೊದಲಾದ ಸಮಸ್ತ ಜೀವನವನ್ನು ಪರಿಭಾವಿಸುವ ದೃಷ್ಟಿಯನ್ನೂ ಅವರು ಅಳವಡಿಸಿದ ವಿದ್ಯಾಭ್ಯಾಸ ಕ್ರಮದ ಮೂಲಕ ಬದಲಾಯಿಸಿದರು.

ಯುರೋಪಿನಲ್ಲಿ ಬೆಳೆದ ಅಧ್ಯಯನದ ಕ್ರಮದಿಂದ ಮಾತ್ರವಲ್ಲ, ತಮ್ಮ ಸಾಮ್ರಾಜ್ಯವನ್ನು ಗಟ್ಟಿಗೊಳಿಸುವ ಒಳ ಉದ್ದೇಶವು ಅವರ ಎಲ್ಲ ಅಧ್ಯಯನಗಳಲ್ಲೂ ಇತ್ತು. ನಮ್ಮ ಶಿಕ್ಷಣ ಪದ್ಧತಿ ಮತ್ತು ವಿದ್ವತ್ ಪ್ರಪಂಚದಲ್ಲಿ ಅವರು ಬೇರೂರಿಸಿದ್ದ ಬಹುತೇಕ ಸಿದ್ಧಾಂತಗಳನ್ನು ಅವರು ಹೋದ ನಂತರ ರಾಷ್ಟ್ರದ ಅಧಿಕಾರವನ್ನು ಹಿಡಿದುಕೊಂಡವರು ಮುಂದು ವರೆಸಿದುದು ಮಾತ್ರವಲ್ಲ, ತಮ್ಮ ತಮ್ಮ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳಲು ಹೊಸ ಹೊಸ ರೀತಿಯಲ್ಲಿ ಬಳಸಿಕೊಳ್ಳತೊಡಗಿದರು. ದರು. ಉನ್ನತ ಶಿಕ್ಷಣ, ಸಂಶೋಧನಾ ಸಂಸ್ಥೆಗಳು, ವಿದ್ವತ್ ಸಂಸ್ಥೆಗಳು, ಧನಸಹಾಯದ ಕಛೇರಿ ಗಳು, ಮಾಧ್ಯಮಗಳು, ಮಾಧ್ಯಮಗಳಲ್ಲಿ ಕೆಲಸ ಮಾಡುವ ಮಂದಿಗಳನ್ನು ತಯಾರಿಸುವ ತರಬೇತಿ ಸಂಸ್ಥೆಗಳು, ಹೀಗೆ ರಾಷ್ಟ್ರದ ಬೌದ್ಧಿಕ ಜೀವನದ ಎಲ್ಲ ಕ್ಷೇತ್ರಗಳನ್ನೂ ಅವರು ಆಕ್ರಮಿಸಿಬಿಟ್ಟರು.

ಸ್ವತಃ ಘನವಿದ್ವಾಂಸರೂ, ಇತಿಹಾಸದ ಪ್ರಕಾಂಡ ಸಂಶೋಧಕರೂ ಆದ ಸೀತಾರಾಮ ಗೋಯಲ್‌ರು ತಮ್ಮ ಪುಸ್ತಕಗಳನ್ನು ಪ್ರಕಟಿಸಲು “Voice of India’ ಎಂಬ ಹೆಸರಿನಿಂದ ಒಂದು ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದರು. ತಮ್ಮವು ಮಾತ್ರವಲ್ಲದೆ, ತಮ್ಮಂತೆ ಪ್ರಕಾಶಕರನ್ನು ಕಾಣದೆ ತಪಿಸುತ್ತಿದ್ದ ಇತರ ಸಂಶೋಧಕರ ಗ್ರಂಥಗಳನ್ನೂ ಪ್ರಕಟಿಸಿದರು. ಹೀಗಾಗಿ ತೆರಿಗೆದಾರರ ಹಣ ವನ್ನು ಖರ್ಚುಮಾಡಿ ಸತ್ಯವನ್ನು ಮುಚ್ಚುವವರ ಪ್ರಯತ್ನವು ಪೂರ್ತಿಯಾಗಿ ಫಲಿಸಲಿಲ್ಲ.

ಬ್ರಿಟಿಷರ ಒಡೆದು ಆಳುವ ನೀತಿಯಿಂದಾಗಿ ಚಿಗುರಿದ ಮುಸ್ಲಿಂ ಪ್ರತ್ಯೇಕತಾವಾದವು ೧೯೪೭ರ ದೇಶವಿಭಜನೆಯ ನಂತರವೂ ಉಳಿದುಕೊಂಡಿರುವುದು ಮತ್ತು ಅದು ದೇಶದ ರಾಷ್ಟ್ರೀಯತೆಗೆ ಭಂಗತರುವ ರೀತಿಯಲ್ಲಿ ವಿಸ್ತರಿಸಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ. ಮುಸಲ್ಮಾನರ ಈ ಪ್ರತ್ಯೇಕತಾವಾದಕ್ಕೆ ಕಾರಣಗಳು ಮತ್ತು ಅದರ ಪರಿಣಾಮಗಳ ಕುರಿತು ಶ್ರೇಷ್ಠ ಚಿಂತಕ ಸೀತಾರಾಮ ಗೋಯಲ್ ಅವರ ಸಂಶೋಧನಾತ್ಮಕ ಬರಹ – ಮುಸ್ಲಿಂ ಪ್ರತ್ಯೇಕತಾವಾದ.

Reviews

There are no reviews yet.

Be the first to review “ಮುಸ್ಲಿಂ ಪ್ರತ್ಯೇಕತಾವಾದ | ಸೀತಾರಾಮ ಗೋಯಲ್”

Your email address will not be published. Required fields are marked *

Scroll to Top