ನನ್ನ ಕೃಷ್ಣ | ಎಂ ಶ್ರೀನಿವಾಸನ್

Sale!

ನನ್ನ ಕೃಷ್ಣ | ಎಂ ಶ್ರೀನಿವಾಸನ್

Original price was: ₹325.00.Current price is: ₹292.50.

ಶ್ರೀಕೃಷ್ಣ ಲೋಕೋತ್ತರ ನಾಯಕ. ಆತನ ಕುರಿತು ಬರೆದಷ್ಟೂ ಬಗೆದಷ್ಟೂ ಮತ್ತಷ್ಟು ಹೊಸತನಗಳೊಂದಿಗೆ ತೆರೆದುಕೊಳ್ಳುವ ಮಹಾನ್ ಚೇತನ. ಈ ಕಾರಣ ದಿಂದಲೇ ಕೃಷ್ಣಕಥೆಯನ್ನು ‘ಬರೆದು ಮುಗಿಯಿತು’ ಎನ್ನುವಂತಿಲ್ಲ, ಆತನನ್ನು ಕುರಿತು ಹೇಳಿ ದಣಿದವರಿಲ್ಲ: ಕೇಳಿ ತಣಿಯದವರಿಲ್ಲ. ಹೇಳುತ್ತ ಹೇಳುತ್ತ ಹೇಳುವವರ ಉತ್ಸಾಹ ನೂರ್ಮಡಿಯಾಗುತ್ತದೆ, ಶಕ್ತಿಸಂಚಯವಾಗುತ್ತದೆ; ಕೇಳುತ್ತ ಕೇಳುತ್ತ ಎಂಥವ ರಲ್ಲೂ ಜೀವನಪ್ರೀತಿ ಉಕ್ಕುತ್ತದೆ. ಅಂಥ ಕೃಷ್ಣನ ಜೀವನಕಥನವನ್ನು – ಮಹಾಭಾರತ-ಹರಿವಂಶ-ಭಾಗವತಗಳಿಗೆ ನಿಷ್ಠರಾಗಿ – ಕಟ್ಟಿಕೊಟ್ಟಿದ್ದಾರೆ. ಲೇಖಕರೂ ಪತ್ರಕರ್ತರೂ ಆಗಿರುವ ಶ್ರೀ ಎಂ. ಶ್ರೀನಿವಾಸನ್ ಅವರು.

ಭಾಗವತಪುರಾಣ ಮತ್ತು ಮಹಾಭಾರತ ಸಂದರ್ಭಗಳನ್ನು ಬಳಸಿಕೊಂಡು ಕೃಷ್ಣನನ್ನು ಮತ್ತೊಂದು ಆಯಾಮದಲ್ಲಿ ಚಿತ್ರಿಸುವ ಪ್ರಯತ್ನ ಈ ಕಾದಂಬರಿ. ಕೃಷ್ಣನನ್ನು ಪವಾಡಪುರುಷನನ್ನಾಗಿಸದೆ, ಅಘಟಿತ ಘಟನಾಪಟುವೆಂದು ತೋರಿಸದೇ ಸಾಧಕನೆಂದು ನಿರೂಪಿಸುವ ಸಾಹಸ ಮಾಡಿದ್ದಾರೆ, ಲೇಖಕರು.

Reviews

There are no reviews yet.

Be the first to review “ನನ್ನ ಕೃಷ್ಣ | ಎಂ ಶ್ರೀನಿವಾಸನ್”

Your email address will not be published. Required fields are marked *

Scroll to Top