ಅಡುಗೆ ಎನ್ನುವುದೊಂದು ಕಲೆ. ಮನುಷ್ಯನ ನಿತ್ಯಜೀವನ ಆರೋಗ್ಯಕರವಾಗಿ ಸಾಗಬೇಕೆಂದರೆ ಸೇವಿಸುವ ಆಹಾರ ಅಚ್ಚುಕಟ್ಟಾಗಿ ರುಚಿಕರವಾಗಿ ಪೌಷ್ಠಿಕಾಂಶಭರಿತವಾಗಿ ಇರಬೇಕು. ಆಧುನಿಕೀರಣದ ೀ ಕಾಲಘಟ್ಟದಲ್ಲಿಉತ್ತಮ ಆಹಾರಮೂಲವನ್ನು ಹುಡುಕಿ ಸಿದ್ಧಪಡಿಸಿ ಸೇವಿಸುವುದು ಒಂದು ಸವಾಲಾಗಿದೆ. ಮನೆಯಲ್ಲೇ ಅಡುಗೆ ಮಾಡಿಕೊಳ್ಳುತ್ತೇವೆ ಅಂದರೆ ಹಲವರಿಗೆ ಅಡುಗೆಯೇ ತಿಳಿಯದ ಕಾಲವಿದು. ತಿಳಿದಿದ್ದರೂ ಅದೊಂದಿಷ್ಟು ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿಯೋ ಮತ್ತೊಂದಿಷ್ಟು ‘ರೆಡಿ ಟು ಈಟ್’ ಆಹಾರಗಳನ್ನವಲಂಬಸಿ ಇರುತ್ತದೆ. ಅಂಥವನ್ನು ಸೇವಿಸಿ ಉತ್ತಮ ಆರೋಗ್ಯ ಬೇಕು ಎಂದು ಆಶಿಸುವುದಕ್ಕೆ ಸಾಧ್ಯವೇ?
“ಸರಳ ಅಡುಗೆಗಳು” ಎಂಬ ಈ ಪುಸ್ತಕ ಈ ಸಮಸ್ಯೆಗೊಂದು ಪರಿಹಾರವನ್ನು ಹೊಂದಿದೆ. ಸುಲಭ, ಸರಳ, ಪೌಷ್ಠಿಕ ಹಾಗೂ ಮಿತವ್ಯಯಿ ಅಡುಗೆಯ ವಿಧಾನವನ್ನು ಲೇಖಕಿ ಸುಭಾಷಿಣಿ ಹಿರಣ್ಯ ಇಲ್ಲಿ ಪರಿಚಯಿಸಿದ್ದಾರೆ. ನಮ್ಮ ಅಡುಗೆಮನೆಯಲ್ಲಿ, ಹಿತ್ತಲಲ್ಲಿರುವ ತೋಟದಲ್ಲಿ ಸುಲಭವಾಗಿ ದೊರಕುವ ಸೊಪ್ಪು ತರಕಾರಿಗಳನ್ನೆ ಬಳಸಿ ರುಚಿ ರುಚಿಯಾದ ಅಡುಗೆ ತಿನಿಸುಗಳನ್ನು ತಯಾರಿಸಿಕೊಳ್ಳುಬಹುದಾದ 44 ವಿವಿಧ ಅಡುಗೆ ವಿಧಾನಗಳನ್ನು ಈ ಹೊತ್ತಗೆಯಲ್ಲಿ ಅವರು ವಿವರಿಸಿದ್ದಾರೆ.





Reviews
There are no reviews yet.