ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ)

Sale!

ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ)

Original price was: ₹120.00.Current price is: ₹108.00.

ಪುಸ್ತಕದ ಹೆಸರು: ಸೂಕ್ತಿ-ಸ್ತಬಕ
ಲೇಖಕರು: ಎಸ್‌.ಆರ್‌. ರಾಮಸ್ವಾಮಿ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘

‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.

ಸುಭಾಷಿತಗಳು’ ಸಂಸ್ಕೃತ ಸಾಹಿತ್ಯದ ಒಂದು ಪ್ರಮುಖ ಅಂಗ, ಲೋಕಾನುಭವವನ್ನೂ ಮಾರ್ಗದರ್ಶಕ ಬೋಧೆಯನ್ನೂ ಅತ್ಯಂತ ಕಡಿಮೆ ಶಬ್ದಗಳಲ್ಲಿ ಮತ್ತು ಸ್ಮರಣಾನುಕೂಲ ಶೈಲಿಯಲ್ಲಿ ಸಂಗ್ರಹಿಸಿರುವ ಉಕ್ತಿಗಳು ‘ಸು-ಭಾಷಿತ’ಗಳೆನಿಸಿವೆ. ಇಂತಹ ಸೂಕ್ತಿಗಳು ಎಲ್ಲ ಭಾಷೆಗಳಲ್ಲಿಯೂ ಇರುವುವಾದರೂ ಸಂಸ್ಕೃತದಲ್ಲಿ ಇವು ವಿಪುಲ ಸಂಖ್ಯೆಯಲ್ಲಿವೆ. ಕಾವ್ಯ-ನಾಟಕಗಳಲ್ಲಿ ಸಾಂದರ್ಭಿಕವಾಗಿ ಬಂದಿರುವ ಎಷ್ಟೋ ಪದ್ಯಗಳು ‘ಸುಭಾಷಿತ’ಗಳಾಗಿ ಪ್ರಚಲಿತವಾಗಿವೆ. ಅವಕ್ಕಿಂತ ಬಹುಪಾಲು ಹೆಚ್ಚಿನ ಬಿಡಿ ಪದ್ಯಗಳು ಎಷ್ಟೋ ಶತಮಾನಗಳಿಂದ ಮೌಖಿಕವಾಗಿ ಚಲಾವಣೆಯಲ್ಲಿವೆ. ಹೆಚ್ಚಿನ ಸುಭಾಷಿತಗಳು ನೇರವಾಗಿಯೆ ಉಪದೇಶಾತ್ಮಕವಾಗಿರುತ್ತವಾದರೂ ಅನುಭವ ಸಾಂದ್ರತೆಯಿಂದಲೊ ಉಕ್ತಿಚಮತ್ಕಾರದಿಂದಲೊ ಲೋಕಪ್ರಿಯವಾಗಿರುವ ಸುಭಾಷಿತಗಳೂ ಉಂಟು.

‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ 2003-2008ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ

Reviews

There are no reviews yet.

Be the first to review “ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ)”

Your email address will not be published. Required fields are marked *

Scroll to Top