ದಶಕಗಳ ಚಿಂತನ, ಮನನ, ಸಮಾಜದೊಡನೆ ನಿತ್ಯ ಸಂಪರ್ಕವಿದ್ದ ವ್ಯಕ್ತಿಯೊಬ್ಬ ಚಿಂತನೆಯ ಕ್ಷೇತ್ರದಲ್ಲಿ ಮೂಡಿಸಿದ ಹೆಜ್ಜೆಗಳಿವೆ. ಇಲ್ಲಿ ಚಿಂತನೆ, ಅಭಿಪ್ರಾಯ, ವಾದ, ವಾಗ್ದಾದ, ಪರಿಭಾಷೆಗಳ ಸೃಷ್ಟೀಕರಣ, ಕೆಲವು ಹೊಳಹು ವಿಫುಲ ಅಧ್ಯಯನ ಸಾಮಾಗ್ರಿ ಎಲ್ಲ ಬೆರೆತಿದೆ. ಭಾಷೆ ಕೆಲವೊಮ್ಮೆ ತೀರಾ ಬೌದ್ಧಿಕ. ಕೆಲವೊಮ್ಮೆ ಭಾವುಕ. ಇಂಥ ಬರಹದಲ್ಲಿ ಶೈಲಿಯ ಏಕರೂಪತೆಯನ್ನು ನಿರೀಕ್ಷಿಸುವುದು ಸ್ವಲ್ಪ ಹೆಚ್ಚಾದೀತು.ಹಿಂದೂ ಚಿಂತನೆಯನ್ನು ಜೀವನವಿಡೀ ನಂಬಿ ಬದುಕಿದ ಪ್ರಾಮಾಣಿಕ ಮನಸ್ಸೊಂದು ಮೂಡಿಸಿದ ಟಿಪ್ಪಣಿಗಳಿವು.
ವ್ಯಕ್ತಿ ಹುಟ್ಟುವುದು,ಸಾಯುವುದು ನೈಸರ್ಗಿಕ. ಆದರೆ ಆತ/ ಆಕೆ ವಿಚಾರವನ್ನು ಹಿಂದೆ ಬಿಟ್ಟುಹೋಗುವುದು ದೊಡ್ಡದು. ಸಾವಿರಾರು ಮಂದಿ ತರುಣ ತರುಣಿಯರಿಗೆ ಜೀವನ ಮೌಲ್ಯಗಳನ್ನು ಬೋಧಿಸಿ, ತಾವೂ ಅಂತೆಯೇ ಬಾಳಿದ ಡಾ.ಉಪೇಂದ್ರ ಅವರ ಚಿಂತನೆ ವಿಶಾಲ ಸಮಾಜದ ಸಮಕಾಲೀನ ವೈಚಾರಿಕಾ ಯಾತ್ರೆಯನ್ನು ಸಮೃದ್ಧಗೊಳಿಸುವುದರಲ್ಲಿ ಸಂಶಯವಿಲ್ಲ. ಬಹುಮುಖಿ ಪ್ರತಿಭೆಯ ಈ ಸಾಮಾಜಿಕ ವೈದ್ಯರ ಚಿಕಿತ್ಸಕ ದೃಷ್ಟಿಯಿಂದ ಓದುಗರು ಲಾಭ ಪಡೆಯಲಿ, ಈ ಚರ್ಚೆ ಇಲ್ಲಿಗೆ ನಿಲ್ಲದಿರಲಿ ಎಂದು ಆಶಿಸುತ್ತೇನೆ.





Reviews
There are no reviews yet.