ಉತ್ತುಂಗ – ಕೃ. ಸೂರ್ಯನಾರಾಯಣ ರಾವ್‌ ಅವರ ಜೀವನ ಚಿತ್ರಣ

ಉತ್ತುಂಗ – ಕೃ. ಸೂರ್ಯನಾರಾಯಣ ರಾವ್‌ ಅವರ ಜೀವನ ಚಿತ್ರಣ

ಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್‌ ಅವರ ಜೀವನ ಚಿತ್ರಣ
ಲೇಖಕರು: ಕೃಷ್ಣಪ್ರಸಾದ ಬದಿ
ಪ್ರಕಾಶಕರು: ಸಾಹಿತ್ಯ ಸಂಗಮ
ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು.

ಅಂತಹ ಓರ್ವ ಶ್ರೇಷ್ಠ ವ್ಯಕ್ತಿ ತನ್ನ ಬದುಕಿನಲ್ಲಿ ವಹಿಸಿದ್ದ ಪರಿಶ್ರಮಗಳು, ತನ್ನ ದಾರಿಯಲ್ಲಿ ಮಾಡಿದ್ದ ಹೆಜ್ಜೆಗುರುತುಗಳು ಅರ್ಥಾತ್ ಅವರ ಜೀವನದ ಅಸಂಖ್ಯ ಪ್ರೇರಣಾಪ್ರದ ತೇಜೋಪುಂಜ ವಿಚಾರಗಳನ್ನು ಬಿಂಬಿಸಿರುವ ಶಬ್ದಚಿತ್ರಗಳು ಈ ಪುಸ್ತಕದಲ್ಲಿ ಬೆಳಕು ಕಂಡಿವೆ. ಅವೆಲ್ಲವನ್ನೂ ತಿಳಿಯುವ ಸದವಕಾಶ ಓದುಗರಿಗೆ ಈ ಪುಸ್ತಕದಲ್ಲಿ ಲಭಿಸಲಿದೆ.
ಅವರ ಚಿಂತನೆಯಲ್ಲಿನ ಸ್ಪಷ್ಟತೆ, ಮಾತಿನ ಹಾಗೂ ಅದರ ಶೈಲಿಯ ಪ್ರಖರತೆ ಕೂಡ ಇದರಲ್ಲಿ ಎದ್ದು ಕಾಣುವಂತಿವೆ. ಸುಮಾರು 70 ವರ್ಷಗಳಷ್ಟು ಸುದೀರ್ಘ ಕಾಲದ ಅವರ ಜೀವನಯಾತ್ರೆ, ಅದರಲ್ಲಿ ಅವರು ಎದುರಿಸಿದ್ದ ಅನುಕೂಲತೆ ಮತ್ತು ಪ್ರತಿಕೂಲತೆಗಳು, ಇನ್ನೂ ಹಲವು ವಿಧದ ಅನುಭವಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಆಗಿನ್ನೂ ಬೆಳವಣಿಗೆಯ ಹಂತದಲ್ಲಿದ್ದ ಸಂಘಕಾರ್ಯಕ್ಕೆ ಅವರು ನೀಡಿದ್ದ ರಭಸ ಇವು ಸೂರ್ಯನಾರಾಯಣ ರಾವ್ ರೂಪದಲ್ಲಿ ಮೂರ್ತಿಭವಿಸಿರುವುದನ್ನು ನಾವಿಲ್ಲಿ ಕಾಣಬಹುದು.

Reviews

There are no reviews yet.

Be the first to review “ಉತ್ತುಂಗ – ಕೃ. ಸೂರ್ಯನಾರಾಯಣ ರಾವ್‌ ಅವರ ಜೀವನ ಚಿತ್ರಣ”

Your email address will not be published. Required fields are marked *

Scroll to Top