ನಾಡಿನ ಹಿರಿಯ ಪರ್ತಕರ್ತ ಲೇಖಕ “ಚಿರಂಜೀವಿ” ಅವರು ‘ಯಶಸ್ಸಿಗೊಂದು ಯುಕ್ತಿಮಾರ್ಗ’ ಎಂಬ ಈ ಪುಸ್ತಕವನ್ನು ರಚಿಸಿ ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಉಪಯೋಗವಾಗುವಂಥ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಮಕ್ಕಳ ವ್ಯಕ್ತಿತ್ವವನ್ನು ವಿಕಸಿತಗೊಳಿಸಿಬಲ್ಲ ಹಲವು ಮಾಹಿತಿಗಳನ್ನು ಲೇಖಕರು ಇಲ್ಲಿ ಸಂಗ್ರಹವಾಗಿ ಹೇಳಿದ್ದಾರೆ. ನಿರೂಪಣಾ ಶೈಲಿ ಅತ್ಯಂತ ಸರಳವಾಗಿ ಆತ್ಮೀಯವಾಗಿದೆ.
ಮಕ್ಕಳ ಹಸಿ ಮನಸ್ಸಿನಲ್ಲಿ ಗಟ್ಟಿಬೀಜವನ್ನು ಬಿತ್ತದೇ ಹೋದರೆ ಕಳೆಯೇ ಬೆಳೆಯಾಗುವುದು ನಿಸ್ಸಂಶಯವಲ್ಲವೇ? ಜವಾಬ್ದಾರಿಯುತ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಉತ್ತಮ ನಾಂದಿ ಹಾಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದಿ ಅಧಿಕವಾಗಿದೆ.





Reviews
There are no reviews yet.