ಬೆಂಗಳೂರು, ನ. 30: ಕನ್ನಡ ಪುಸ್ತಕ ಹಬ್ಬದಲ್ಲಿ 36ನೆಯ ದಿನ ವೀರವನಿತೆ ಅಹಲ್ಯಾಬಾಯಿ ಹೋಳ್ಕರ್ 300ನೇ ಜನ್ಮವರ್ಷ ಆಚರಣೆಯಲ್ಲಿ ಲೇಖಕರು ಹಾಗೂ ಕಾದಂಬರಿಕಾರರಾದ ಶ್ರೀಮತಿ ಸಹನಾ ವಿಜಯಕುಮಾರ್ ಅವರು ಭಾರತದ ಪುನರುತ್ಥಾನಕ್ಕೆ ಅಹಲ್ಯಾಬಾಯಿ ಹೋಳ್ಕರ್ ಅವರು ನೀಡಿದ ಕೊಡುಗೆಗಳ ಬಗೆಗೆ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ವಹಿಸಿದ್ದು, ಶ್ರೀಮತಿ ಶಾರದಾ ವಿ ಮೂರ್ತಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗೂ ರಾಷ್ಟ್ರ್ರ ಸೇವಿಕಾ ಸಮಿತಿಯವರು ಸಮಾರಂಭವನ್ನು ಆಯೋಜಿಸಿದ್ದರು.
