ಬೆಂಗಳೂರು:ಐದನೇ ಪುಸ್ತಕ ಹಬ್ಬವು 37 ದಿನಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವದೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ. 17ನೇ ದಿನ ಕೇಶವಶಿಲ್ಪ ಸಂಭಾಗಣದಲ್ಲಿ ಶ್ರೀ ಸತೀಶ್ ಭಜಂತ್ರಿ ಅವರಿಂದ ಶಹನಾಯಿ ವಾದನ ಕಾರ್ಯಕ್ರಮ ನಿರವೇರಿತು. ಶಹನಾಯಿ ಸುಮಧುರ ನಾದವು ಸಭಾಂಗಣದಲ್ಲಿ ಮೊಳಗುತ್ತಿದ್ದಂತೆ, ನೆರೆದಿದ್ದ ಪ್ರೇಕ್ಷಕರು ಮಂತ್ರಮುಗ್ಧರಾದರು.
















