ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿದ 5ನೇ ಕನ್ನಡ ಪುಸ್ತಕ ಹಬ್ಬದಲ್ಲಿ ಸಂಸ್ಕಾರ ಭಾರತೀ ಬೆಂಗಳೂರು ಇವರು ಸಹಯೋಗದಲ್ಲಿ 37 ದಿನಗಳ ಸಾಹಿತ್ಯ- ಸಂಸ್ಕೃತಿ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಈ ಉತ್ಸವದ ನಾಲ್ಕನೇ ದಿನದಂದು ವಿದ್ವಾನ್ ದಕ್ಷಿಣಾಮೂರ್ತಿ ಹಾಗೂ ತಂಡದವರಿಂದ “ನಾದಸ್ವರಗೋಷ್ಠಿ” ಕಾರ್ಯಕ್ರಮ ನಡೆಯಿತು. ಮೋಹಕ ಸ್ವರ ಮತ್ತು ಉತ್ಸಾಹಭರಿತ ಲಯದೊಂದಿಗೆ ಕೇಳುಗರನ್ನು ರಂಜಿಸಿದ ಕ್ಷಣಗಳು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ…

























