ರಾಷ್ಟ್ರೋತ್ಥಾನ ಪರಿಷತ್ ಆವರಣದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಕಳೆದ 22 ದಿನಗಳಿಂದ ಸಾಹಿತ್ಯ-ಸಾಂಸ್ಕೃತಿಕ ಉತ್ಸವ ನಡೆಯುತ್ತಿದ್ದು; ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಬೆಂಗಳೂರು ಇದರ ಸಹಯೋಗದಲ್ಲಿ ನವೆಂಬರ್ 23 ಭಾನುವಾರ ಸಂಜೆ ವಿದ್ಯಾಭೂಷಣ ಹಾಗೂ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಅದ್ಭುತವಾಗಿ ನೆರವೇರಿತು. ಡಾ. ವಿದ್ಯಾಭೂಷಣರು ಸಂಗೀತ ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಪ್ರಿಯರು ಆಗಮಿಸಿದ್ದು, ಕೇಶವಕೃಪ ಸಭಾಂಗಣ ತುಂಬಿತುಳುಕಿತ್ತು.



































