ಈ ಪುಸ್ತಕವು ಹಲವಾರು ರೋಗಗಳಿಗೆ ಸಿದ್ದವಾದ ಔಷಧಿಗಳ ಕೈಪಿಡಿಯಾಗಿದೆ. ಇದರಲ್ಲಿ ಸಾಮಾನ್ಯ ರೋಗಗಳನ್ನು ಗುಣಪಡಿಸುವ ವಿವಿಧ ಚಿಕಿತ್ಸೆ ಬಗ್ಗೆ ಮಾಹಿತಿ ಇದೆ. ಜ್ವರ, ಭೇದಿ, ವಾಂತಿ, ಹೊಟ್ಟೆನೋವು, ತಲೆನೋವು, ಸೊಂಟನೋವು, ಕೆಮ್ಮು, ದಮ್ಮು, ಮುಟ್ಟುನೋವು, ಸಂಧಿನೋವು, ಮುಂತಾದವುಗಳ ಬಗ್ಗೆ ಮನೆದುದ್ದುಗಳಿವೆ. ಇವೆಲ್ಲವೂ, ಅಲರ್ಜಿಯನ್ನುಂಟು ಮಾಡುವ ಆಧುನಿಕ ಪದ್ಧತಿಗಳಂತೆ ಅಲ್ಲ ಬದಲಿಗೆ, ಯಾವುದೇ ಪಾರ್ಶ್ವ ಪರಿಣಾಮಗಳಿಲ್ಲದ, ಕಡಮೆ ಖರ್ಚಿನಲ್ಲಿ ದೊರೆಯುವ ಮನೆಮದ್ದುಗಳಾಗಿದ್ದು, ಸಾಮಾನ್ಯ ಜನರಿಗೂ ಎಟುಕುವಂತಹವು ಇವುಗಳಿಂದ ರೋಗಗಳನ್ನು ಗುಣಪಡಿಸಿ ಆರೋಗ್ಯವನ್ನು ಕಾಪಾಡಿಕೊಂಡು ಮನುಷ್ಯನು ನೂರುವರ್ಷ ಬದುಕಬಹುದು.
ಡಾ|| ಟಿ.ಎಲ್. ದೇವರಾಜ್ ರವರು ಬೆಂಗಳೂರಿನಲ್ಲಿ ಶ್ರೀವೈದ್ಯನಾಥ ಆಯುರ್ವೇದ ಭವನದಲ್ಲಿ ಆಯುರ್ವೇದ ಸಲಹೆಗಾರರಾಗಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಶ್ರೀರಾಮನಾರಾಯಣ ವೈದ್ಯ ಟ್ರಸ್ಟ್‌ನಿಂದ ಶ್ರೀ ರಾಮನಾರಾಯಣಶರ್ಮ ರಾಷ್ಟ್ರೀಯ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಪಡೆದ ಕರ್ನಾಟಕದ ಏಕೈಕ ವೈದ್ಯರಾಗಿದ್ದಾರೆ. ಆಯುರ್ದೇದ ಕುರಿತು 40ಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಇವರು ಬರೆದ ಹಲವಾರು ಪುಸ್ತಕಗಳು ಭಾಷಾಂತರಗೊಂಡಿದೆ. ‘ಆಯುರ್ವೇದ ರೆಮಿಡೀಸ್ ಫಾರ್ ಕಾಮನ್ ಡಿಸಿಸನ್’ ಪುಸ್ತಕವು ಇಂಗ್ಲಿಷಿನಲ್ಲಿ ಹಲವಾರು ಬಾರಿ ಮುದ್ರಣಗೊಂಡಿದೆ ಮತ್ತು ‘ರಷ್ಯಾ ಭಾಷೆಗೂ ಅನುವಾದ ಗೊಂಡಿದೆ. ಜನಸಾಮಾನ್ಯರಿಗೂ ಈ ಕನ್ನಡ ಅನುವಾದ ಉಪಕಾರಿಯಾದೀತು ಎನ್ನುವುದು ನಮ್ಮ ನಂಬಿಕೆ.





Reviews
There are no reviews yet.