ಸ್ವಾತಂತ್ರ್ಯ ಅಮೃತಮಹೋತ್ಸವದ ಆಚರಣೆಯ (೨೦೨೨-೨೩) ಸಂದರ್ಭದಲ್ಲಿ ದಶಕಗಳುದ್ದಕ್ಕೂ ‘ಸ್ವಾತಂತ್ರ್ಯವೀರ’ರೆಂಬ ವರ್ಣನೆಯ ಮೂಲಕವೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರಕರ್ ಅವರು (೧೮೮೩-೧೯೬೬) ಸ್ವಾತಂತ್ರೋದ್ಯಮಕ್ಕೆ ನೀಡಿದ ಅತುಲನೀಯ ಯೋಗದಾನದ ಸ್ಮರಣೆ ಅನಿವಾರ, ಪ್ರಬೋಧಕ. ಅಸಮಾನ ಕ್ರಾಂತಿ ಕಾರಿಯಾಗಿದ್ದುದಲ್ಲದೆ ಕ್ರಾಂತಿಶಾಸ್ತ್ರವನ್ನೇ ನಿರ್ಮಿಸಿದವರು ಅವರು. ಅದಕ್ಕೂ ಮಿಗಿಲಾಗಿ ದೇಶದ ಸ್ವಾಯತ್ತತೆಗೂ ಸುಸ್ಥಿರ ಅಭ್ಯುದಯಕ್ಕೂ ಪೂರಕವಾದ ಮತ್ತು ಪರಂಪರಾಧಾರಿತವಾದ ರಾಷ್ಟ್ರೀಯ ಪರಿಶುದ್ಧ ಕಲ್ಪನೆಯನ್ನು ಆವಿಷ್ಕರಿಸಿ ಪ್ರಚಾರ ಮಾಡಿದ ದಾರ್ಶನಿಕರು ಅವರು; ಋಜುವಾದ ಇತಿಹಾಸರಚನೆಯ ಹೊಸದೊಂದು ಪ್ರಸ್ಥಾನವನ್ನೇ ರೂಪಿಸಿದವರು.
ಆತ್ಯಂತಿಕ ತ್ಯಾಗಪೂರ್ವಕವಾದ ಅವರ ಘಟನಾಪೂರ್ಣ ಜೀವನ ದೇಶಭಕ್ತರೆಲ್ಲರಿಗೂ ಚಿರಂತನ ಸ್ಪೂರ್ತಿ ಸ್ಥಾನವಾಗಿ ಉಳಿಯುವಂಥದು.
ಅವರ ಚಿಂತನೆ-ಸಾಧನೆಗಳ ಪ್ರಮುಖ ಆಯಾಮಗಳನ್ನು ಪ್ರಕಟೀಕರಿ ಸುವುದರ ಮೂಲಕ ಅವರ ಕಾಲಜಯೀ ವಾರಸಿಕೆಯನ್ನು ಈಗಿನ ತರುಣ.
ಪೀಳಿಗೆಗೆ ಪರಿಚಯಿಸುವ ಪ್ರಬಂಧಗಳ ಸಂಕಲನ ‘ದ್ರಷ್ಟಾರ ಸಾವರಕರ್’.





Reviews
There are no reviews yet.