ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್

Sale!

ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್

Original price was: ₹600.00.Current price is: ₹540.00.

ಸೀತಾರಾಮ ಗೋಯಲ್ ಅವರ “ಹಿಂದೂ ದೇವಾಲಯಗಳು- ಇಸ್ಲಾಮಿ ವಿಧ್ವಂಸದ   ಇತಿಹಾಸ  (ಅಧ್ಯಾಯ-1)

ಒಂದು ಪೂರ್ವಭಾವಿ ಸರ್ವೇಕ್ಷಣ

ಕನ್ನಡ    ಅನುವಾದ : ಮಂಜುನಾಥ   ಅಜ್ಜಂಪುರ

“ವಾಯ್ಸ ಆಫ್ ಇಂಡಿಯಾ” ಪ್ರಕಟಣಾ ಸಂಸ್ಥೆಯ ಸೀತಾರಾಮ ಗೋಯಲ್ ಅವರು ಕೆಚ್ಚೆದೆಯ ಲೇಖಕ, ಸಂಶೋದಕ. ತಮ್ಮ ಅಪಾರ ಪರಿಶ್ರಮದಿಂದ – ಅಧ್ಯಯನದಿಂದ ಅವರು ಬೆಟ್ಟದಷ್ಟು ಮಾಹಿತಿ, ಪುರಾವೆ ಸಂಗ್ರಹಿಸಿದ್ದಾರೆ, ನೀಡಿದ್ದಾರೆ. ಈ ಸಾಕ್ಷ್ಯಾಧಾರಗಳು ಸ್ಪಷ್ಟವಾಗಿವೆ. ನಿಸ್ಸಂದಿಗ್ಧವಾಗಿವೆ ಮತ್ತು ಸಂದೇಹಕ್ಕೆ ಅವಕಾಶ ನೀಡುವುದಿಲ್ಲ. ಇಸ್ಲಾಮೀ ಆಕ್ರಮಣಕಾರಿಗಳಿಂದ ಹನ್ನೊಂದು ಶತಮಾನಗಳಿಗೂ ಹೆಚ್ಚು ಕಾಲ ಭಾರತದ ದೇವಾಲಯಗಳ ಧ್ವಂಸ ನಡೆಯಿತು. ಉತ್ತರದ ಶಿಂಜಿಯಾಂಗ್‍ನಿಂದ ತಮಿಳುನಾಡಿನವರೆಗೆ, ಪಶ್ಚಿಮದ ಸೇಇಸ್ತಾನದಿಂದ ಪೂರ್ವಾಂಚಲದ ಅಸ್ಸಾಮಿನವರೆಗೆ ನಮ್ಮ ಸಂಸ್ಕೃತಿಯು ಹರಡಿದ್ದ ವಿಶಾಲವಾದ ಪ್ರದೇಶದಲ್ಲೆಲ್ಲಾ ಈ ವಿನಾಶ ನಡೆಯಿತು.
“ಈ ದ್ವಂಸ, ಈ ವಿನಾಶಗಳು ಬರಿಯ ಐಶ್ವರ್ಯದ ಲೂಟಿಯ ಉದ್ದೇಶಕ್ಕೆ ಮಾತ್ರವಲ್ಲ. ಬರಿಯ ರಾಜಕೀಯ ಪರಮಾಧಿಕಾರ ಸ್ಥಾಪಿಸಲು ಮಾತ್ರ ನಡೆಸಿದ್ದಲ್ಲ. ಈ ಎಲ್ಲ ಆಕ್ರಮಣಕಾರಿಗಳ ಪ್ರಚೋದನೆ – ಪ್ರೇರಣೆಗಳು ಮುಖ್ಯವಾಗಿ ಅವರ ರಿಲಿಜನ್ನಿಗೆ ಸಂಬಂಧಿಸಿದಂತಹವು. ಆಕ್ರಮಣಕಾರಿಗಳು ತಮ್ಮ ಮತೀಯ ಸಿದ್ಧಾಂತಕ್ಕೆ ಅನುಗುಣವಾಗಿಯೇ ಮಾಡುತ್ತಿದ್ದೇವೆ, ಎಂಬ ಖಚಿತ ಅಭಿಪ್ರಾಯ ಇಟ್ಟುಕೊಂಡಿದ್ದರು. ಇದು ಇಸ್ಲಾಂ-ನಿಷ್ಠ ಕಾರ್ಯವೆಂದು ಪರಿಭಾವಿಸಿದ್ದರು. ಈ ಕುರಿತು ಅವರಿಗೆ ತುಂಬಾ ಹೆಮ್ಮೆಯಿತ್ತು ಮತ್ತು ದಾಖಲೆಗಳನ್ನು ಉಳಿಸಿದರು, ಗ್ರಂಥಗಳನ್ನು ಬರೆದರು. ಆ ಮೂಲ ಇಸ್ಲಾಮೀ ದಾಖಲೆಗಳೇ ಈ ಗ್ರಂಥದ ಆಧಾರವಾಗಿವೆ. “

Reviews

There are no reviews yet.

Be the first to review “ಹಿಂದೂ ದೇವಾಲಯಗಳು | ಸೀತಾರಾಮ ಗೋಯಲ್”

Your email address will not be published. Required fields are marked *

Scroll to Top