“ಉಬ್ಬಸ” ಒಂದು ವಿಶ್ವವ್ಯಾಪಿ ರೋಗ. ಇದರ ಹಿಂಸೆ ಅಪಾರ. ಸದ್ದಿಲ್ಲದಂತೆ ಮನುಷ್ಯನನ್ನು ಆವರಿಸಿ ಅವನನ್ನು ಜೀವಂತ ಶವವನ್ನಾಗಿ ಮಾಡಿಬಿಡುತ್ತದೆ. “ಉಬ್ಬಸ” ರೋಗ ಬರಲು ಹಲವು ಕಾರಣಗಳಿವೆ. ಆಧುನಿಕ ಜೀವನ ಪದ್ಧತಿ, ಅಸ್ತವ್ಯಸ್ತ ದಿನಚರಿ ಇವು ಪ್ರಮುಖ ಕಾರಣಗಳಿವೆ.
ಆಧುನಿಕ ವೈದ್ಯಪದ್ಧತಿ ಅನುಸಾರ “ಉಬ್ಬಸ”ವನ್ನು ತಡೆಗಟ್ಟಲು, ಗುಣಪಡಿಸಲು ಜಗತ್ತಿನಾದ್ಯಂತ ಗಂಭೀರ ಸಂಶೋಧನೆಗಳು ನಡೆಯುತ್ತಿವೆ. ಈಗಾಗಲೇ ನಡೆದ ಸಂಶೋಧನೆಗಳ ಫಲವಾಗಿ ದೊರೆತ ಔಷಧೋಪಚಾರ ಅಪರಿಪೂರ್ಣ ಅಥವಾ ಅಡ್ಡಪರಿಣಾಮ ಬೀರುವಂಥದ್ದಾಗಿದೆ.
ಉಬ್ಬಸ ರೋಗದ ಕುರಿತು ಜಗತ್ತಿನ ಪ್ರಾಚೀನ ವೈದ್ಯಪದ್ಧತಿ ಯಾದ ಆಯುರ್ವೇದ ನಿಖರವಾದ ಮಾಹಿತಿ ಮತ್ತು ಚಿಕಿತ್ಸಾ ವಿಧಾನವನ್ನು ತಿಳಿಸಿದೆ. ಇದನ್ನು ಪ್ರಯೋಗಿಸಿ, ಸಫಲತೆಯನ್ನು ಕಂಡುಕೊಂಡ ತಜ್ಞ ವೈದ್ಯರ ಲೇಖನಗಳು ಈ ಪುಸ್ತಕದಲ್ಲಿದೆ.
ಓದುಗರೆಲ್ಲರಿಗೂ ಈ ಪುಸ್ತಕ ಪ್ರಯೋಜನಕಾರಿಯಾಗಿದೆ. ಇದರ ಸಹಾಯದಿಂದ ಉಬ್ಬಸ ಬಾರದಂತೆ ಮುಂಜಾಗ್ರತೆ ವಹಿಸಬಹುದು. ಈ ರೋಗದಿಂದ ನರಳುತ್ತಿರುವವರು ತಜ್ಞ ವೈಧ್ಯರು ಸೂಚಿಸಿದ ಚಿಕಿತ್ಸೆಗಳನ್ನು ಅನಾಯಸವಾಗಿ ತಿಳಿದುಕೊಳ್ಳಬಹುದು.





Reviews
There are no reviews yet.