ಭಾಷೆ, ಸಾಹಿತ್ಯ, ಸಂಗೀತಕ್ಷೇತ್ರಗಳಲ್ಲಿ ಗಣ್ಯರೆನಿಸಿದ್ದ ರಾಳ್ಳಪಲ್ಲಿ ಅನಂತ ಕೃಷ್ಣಶರ್ಮರು ಸಂಸ್ಕೃತಿವಿಷಯಕವಾಗಿ ನಡೆಸಿದ ಕೈಂಕರ್ಯ, ನೀಡಿದ ಕೊಡುಗೆ ಬಹಳ ದೊಡ್ಡದು. ತಮ್ಮ ಹಲವು ರೀತಿಯ ಚಟುವಟಿಕೆಗಳ ಮೂಲಕ ಭಾವಜಗತ್ತನ್ನು ಉನ್ನತೀಕರಿಸಲು, ತನ್ಮೂಲಕ ಬದುಕನ್ನು ಸಮೃದ್ಧಗೊಳಿಸಲು ಶ್ರಮಿಸಿದವರು. ಅವರು. ‘ಸಾಹಿತ್ಯ ಮತ್ತು ಜೀವನ ಕಲೆ’ ಕೃತಿಯಲ್ಲಿ ಸಂಕಲಿಸಲ್ಪಟ್ಟಿರುವ ಅವರ ಭಾಷಣಗಳು, ಲೇಖನಗಳ ಆಶಯವೂ ಇದೇ ಆಗಿದೆ.
ಈ ಕೃತಿಯ ‘ಮರು ಓದು’ ನಮ್ಮ ದೃಷ್ಟಿಯನ್ನೂ ಧೋರಣೆ ಯನ್ನೂ ನೇರ್ಪುಗೊಳಿಸಿಕೊಳ್ಳುವುದಕ್ಕೆ ಸಹಕಾರಿಯಾದೀತು.





Reviews
There are no reviews yet.