ಶ್ರೀಗಂಧದ ಸಂಸಾರ- ಗಣಪತಿ ಪುಂಡಲೀಕ ಮಾಜಿಕರರ ಆತ್ಮವೃತ್ತಾಂತ
ಇಪ್ಪತ್ತೊಂದನೆಯ ಶತನಮಾನದಲ್ಲಿ ನಿಂತು ನೋಡುವಾಗ, ‘ನಿಜವಾಗಿಯೂ ಹೀಗೆ ಬದುಕಲು ಸಾಧ್ಯವೆ?”- ಎಂಬ ಪ್ರಶ್ನೆಯನ್ನೂ ಬೆರಗನ್ನೂ ಏಕಕಾಲದಲ್ಲಿ ಹೊಮ್ಮಿಸುವಂಥ ಬದುಕೊಂದನ್ನು ನಮ್ಮೆದುರು ಯಾವುದೇ ಅಬ್ಬರವಿಲ್ಲದೆ, ಉದ್ವೇಗವಿಲ್ಲದೆ, ಹಳಹಳಿಕೆಯಿಲ್ಲದೆ ತೆರೆದಿಡುತ್ತದೆ – ‘ಶ್ರೀಗಂಧದ ಸಂಸಾರ’. ಬಾಲ್ಯದ ಬಡತನ, ವ್ಯಾಪಾರದ ಕಷ್ಟ-ನಷ್ಟಗಳು, ಕೌಟುಂಬಿಕ ನೋವು-ನಲಿವುಗಳು, ಪರಿವಾರದವರ ಒಲವು-ಅಸಹಕಾರಗಳು ಇವೆಲ್ಲವುಗಳ ಮೂಲಕ ಹಾಯ್ದುಬಂದು, ಬಾಳ ಮುಸ್ಸಂಜೆಯಲ್ಲಿ ಹಿಂತಿರುಗಿ ನೋಡುವಾಗಲೂ ಎಲ್ಲೂ ಸ್ತಿಮಿತ ಕಳೆದುಕೊಳ್ಳದ ಗಣಪತಿ ಮಾಪ್ಲೆಕರರ ಮನೋದಾರ್ಡ್ಯ ‘ಸ್ಥಿತಪ್ರಜ್ಞನ ಲಕ್ಷಣಗಳನ್ನು ನೆನಪಿಗೆ ತರುತ್ತದೆ. ಅವರ ಬದುಕಿನ ವಿವರಗಳು, ಪ್ರಶಾಂತ ಪರಿಸರದಲ್ಲಿ ಹರಿಯುವ ಸಣ್ಣ ತೊರೆಯ ಮಂಜುಳನಾದದಂತೆ ಓದುಗರನ್ನು ಬಹುಕಾಲ ಕಾಡುತ್ತವೆ; ಆತ್ಮಾವಲೋಕನಕ್ಕೆ ಹಚ್ಚುತ್ತವೆ; ಬದುಕಿಗೆ ಪ್ರೇರಣೆಯನ್ನೂ ನೀಡುತ್ತವೆ.





Reviews
There are no reviews yet.