ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಆದರೆ ಪೋಷಕರಿಗೆ ಮಾತ್ರ ‘ಈ ಎರಡು ತಿಂಗಳು ಮಕ್ಕಳನ್ನು ಟಿವಿ, ಮೊಬೈಲ್ ಗೇಮ್‌ಗಳಿಂದ ದೂರ ಇಡುವುದು ಹೇಗೆ?‘ ಎಂಬುದೇ ದೊಡ್ಡ ಚಿಂತೆಯಾಗುತ್ತದೆ. ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಮಕ್ಕಳನ್ನು ಪರದೆಯಿಂದ ದೂರವಿಟ್ಟು, ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು ನಿಜಕ್ಕೂ ಸವಾಲೇ ಸರಿ. ಈ ಸವಾಲಿಗೆ ಅತ್ಯುತ್ತಮ ಪರಿಹಾರ ಹಾಗೂ ಈ ಬೇಸಿಗೆ ರಜೆಯನ್ನು ಸಾರ್ಥಕಗೊಳಿಸುವ ಒಂದು ಅದ್ಭುತ ಉಡುಗೊರೆ ನಮ್ಮ ಮುಂದಿದೆ. ಅದೇ ರಾಷ್ಟ್ರೋತ್ಥಾನ ಸಾಹಿತ್ಯ ಹೆಮ್ಮೆಯಿಂದ ಹೊರತಂದಿರುವ ‘ಭಾರತ-ಭಾರತಿ ಪುಸ್ತಕ ಸಂಪದ’.
ಏನಿದು ‘ಭಾರತ-ಭಾರತಿ’ ಸಂಪದ?
ನಮ್ಮ ಭರತಖಂಡದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಹಾರಿಸಿದ ಮಹಾನ್ ಚೇತನಗಳ, ವೀರ ಶೂರರ, ಸಂತ-ಮಹಾತ್ಮರ ಹಾಗೂ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಮಕ್ಕಳಿಗೆ ಪರಿಚಯಿಸುವ 100 ಪುಟ್ಟ ಪುಸ್ತಕಗಳ ಸುಂದರ ಮಾಲಿಕೆ ಇದು. ಕೇವಲ 40-50 ಪುಟಗಳಿರುವ ಈ ಪುಸ್ತಕಗಳು ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮ, ಸಂಸ್ಕಾರ ಮತ್ತು ಶೌರ್ಯದ ಬೀಜವನ್ನು ಬಿತ್ತುತ್ತವೆ.
ಬೆಲೆಯೂ ಅತ್ಯಂತ ಕಡಿಮೆ
ಸಾಮಾನ್ಯವಾಗಿ ನಾವು ಮಕ್ಕಳಿಗೆ ಅಂಗಡಿಯಿಂದ ಕೊಡಿಸುವ ಒಂದು ಚಿಕ್ಕ ಚಾಕಲೇಟ್ ಅಥವಾ ಕುರ್‌ಕುರೆ ಪ್ಯಾಕೆಟ್‌ನ ಬೆಲೆಯೇ ಇತ್ತೀಚೆಗೆ 15 ರಿಂದ 20 ರೂಪಾಯಿಗಳಾಗಿವೆ. ಆದರೆ, ಜ್ಞಾನದ ಮಹಾಸಾಗರವನ್ನೇ ಉಣಬಡಿಸುವ ಈ ಮಾಲಿಕೆಯ ಒಂದು ಪುಸ್ತಕದ ಬೆಲೆ ಕೇವಲ 15 ರೂಪಾಯಿಗಳು! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಕೇವಲ 15 ರೂಪಾಯಿಗೆ ಒಂದು ಪುಸ್ತಕದಂತೆ, ಒಟ್ಟು 100 ಪುಸ್ತಕಗಳ ಸಂಪೂರ್ಣ ಸೆಟ್ ಅನ್ನು ನೀವು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಬಹುದು (1–100 ರಿಂದ ಪುಸ್ತಕಕ್ಕೆ 1,500ರೂ, ಶೇ 10 ರಷ್ಟು ಡಿಸ್ಕೌಂಟ್ ಬಳಿಕ 1,350 ರೂ ಆಗುತ್ತದೆ). ಇಷ್ಟು ಅಗ್ಗದ ಬೆಲೆಯಲ್ಲಿ ಇಂತಹ ಮೌಲ್ಯಯುತವಾದ ಜ್ಞಾನ ಭಂಡಾರ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.
ಮಕ್ಕಳು ಈ ಪುಸ್ತಕಗಳನ್ನು ಏಕೆ ಓದಬೇಕು?
- ಅಚ್ಚಕನ್ನಡದ ಸರಳ ಭಾಷೆ: ಜನಸಾಮಾನ್ಯರಿಗೆ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳಿಗೂ ಸುಲಭವಾಗಿ ಅರ್ಥವಾಗುವಂತೆ ಅತ್ಯಂತ ಸರಳ ಮತ್ತು ಸುಂದರವಾದ ಕನ್ನಡದಲ್ಲಿ ಈ ಪುಸ್ತಕಗಳನ್ನು ರಚಿಸಲಾಗಿದೆ.
- ಬೇಸರವಾಗದ ಗಾತ್ರ: ದೊಡ್ಡ ದೊಡ್ಡ ಪುಸ್ತಕಗಳನ್ನು ಕಂಡರೆ ಮಕ್ಕಳು ಹೆದರುತ್ತಾರೆ. ಆದರೆ ಈ ಪುಟ್ಟ ಪುಸ್ತಕಗಳನ್ನು ಮಕ್ಕಳು ಒಂದೇ ದಿನದಲ್ಲಿ ಓದಿ ಮುಗಿಸಬಹುದು. ಇದರಿಂದ ಅವರಲ್ಲಿ “ನಾನೊಂದು ಪುಸ್ತಕ ಓದಿ ಮುಗಿಸಿದೆ” ಎಂಬ ಆತ್ಮವಿಶ್ವಾಸ ಮೂಡುತ್ತದೆ.
- ಸ್ಫೂರ್ತಿದಾಯಕ ಕಥೆಗಳು: ವಾಲ್ಮೀಕಿ, ಕೃಷ್ಣ, ಶಿವಾಜಿ, ಭಗತ್ ಸಿಂಗ್, ಅಂಬೇಡ್ಕರ್, ವಿವೇಕಾನಂದ, ಸಿ.ವಿ. ರಾಮನ್ ಹೀಗೆ 100 ಬೇರೆ ಬೇರೆ ಸಾಧಕರ ಕಥೆಗಳು ಮಕ್ಕಳ ಮುಂದಿನ ಭವಿಷ್ಯಕ್ಕೆ ದೊಡ್ಡ ಸ್ಫೂರ್ತಿಯಾಗುತ್ತವೆ.
- ಏಕಾಗ್ರತೆ ಮತ್ತು ಭಾಷಾ ಜ್ಞಾನ: ಮೊಬೈಲ್ ನೋಡುವ ಬದಲು ಪುಸ್ತಕ ಓದುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ಕನ್ನಡ ಭಾಷೆಯ ಮೇಲಿನ ಹಿಡಿತ ಉತ್ತಮವಾಗುತ್ತದೆ.
- ಪೋಷಕರಿಗೆ ಕಿವಿಮಾತು…
- ಈ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ದುಬಾರಿ ಆಟಿಕೆಗಳನ್ನು ಕೊಡಿಸುವ ಬದಲು, ಈ ‘ಭಾರತ-ಭಾರತಿ’ ಪುಸ್ತಕಗಳ ಸೆಟ್ ಅನ್ನು ಉಡುಗೊರೆಯಾಗಿ ನೀಡಿ. ದಿನಕ್ಕೊಂದು ಪುಸ್ತಕ ಓದುವ ಗುರಿಯನ್ನು ಅವರಿಗೆ ನೀಡಿ. ರಜೆ ಮುಗಿದು ಶಾಲೆಗೆ ಮರಳುವ ಹೊತ್ತಿಗೆ, ನಿಮ್ಮ ಮಗು ಭಾರತದ 100 ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದಿರುವ ಒಬ್ಬ ಜ್ಞಾನವಂತ ವಿದ್ಯಾರ್ಥಿಯಾಗಿರುತ್ತಾನೆ.
- ಖರೀದಿಸುವುದು ಹೇಗೆ? ನಿಮ್ಮ ಹತ್ತಿರದ ರಾಷ್ಟ್ರೋತ್ಥಾನ ಸಾಹಿತ್ಯ ಮಳಿಗೆಗಳಲ್ಲಿ ಅಥವಾ ಸಾಹಿತ್ಯ ಬುಕ್ಸ್ ಡಾಟ್ ಕಾಮ್ ಅಥವಾ 9591155622 ಈ ನಂಬರ್‌ಗೆ ವಾಟ್ಸ್‌ಆ್ಯಪ್ ಮಾಡಿ.














