ಇತಿಹಾಸವೆಂದರೆ ಕೇವಲ ಯುದ್ಧಗಳು ಮತ್ತು ರಾಜಮನೆತನಗಳ ಏಳು-ಬೀಳುಗಳ ಪಟ್ಟಿಯಲ್ಲ. ಗತಕಾಲದ ಘಟನೆಗಳ ವ್ಯಾಪಕ ಹಿನ್ನೆಲೆ ಮತ್ತು ಅವು ಭವಿಷ್ಯಕ್ಕೆ ನೀಡುವ ಪಾಠಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ಇತಿಹಾಸದ ಅಧ್ಯಯನ ಸಾರ್ಥಕವಾಗುತ್ತದೆ. ಈ ಭೂಮಿಕೆಯಿಂದ ರಚಿತವಾದ ಅದ್ಭುತ ಪ್ರಬಂಧಗಳ ಸಂಗ್ರಹವೇ ‘ಇತಿಹಾಸದ ಸೆರಗು’.
ಎಸ್.ಆರ್. ರಾಮಸ್ವಾಮಿ ಅವರ ಇತಿಹಾಸ ಪ್ರಬಂಧಗಳ ಸರಣಿಯ ಈ ಮೂರನೆಯ ಸಂಕಲನವು, ಪಾಶ್ಚಾತ್ಯ ಅಥವಾ ಕೃತಕ ‘ಸೆಕ್ಯುಲರಿಸ್ಟ್’ ಕನ್ನಡಕದಿಂದ ನೋಡಲ್ಪಟ್ಟ ಇತಿಹಾಸದ ಬದಲು, ನೈಜ ಭಾರತೀಯ ದೃಷ್ಟಿಕೋನದ ಸತ್ಯಗಳನ್ನು ಓದುಗರ ಮುಂದೆ ತೆರೆದಿಡುತ್ತದೆ.
ಈ ಪುಸ್ತಕದ ಪ್ರಮುಖ ವಿಷಯಗಳು:
- ಪ್ರಾಚೀನ ಪರಂಪರೆ: ನಮ್ಮ ನಾಗರಿಕತೆಗೆ ಚಾಣಕ್ಯ ನೀಡಿದ ಅಮೂಲ್ಯ ಕೊಡುಗೆಗಳು.
- ವೈಭವದ ಕಾಲಘಟ್ಟ: ವಿಜಯನಗರದ ಸಾರ್ವಭೌಮ ಕೃಷ್ಣದೇವರಾಯನ ಸಾಧನೌನ್ನತ್ಯ ಮತ್ತು ಸಾಮ್ರಾಜ್ಯದ ಮಹಿಮೆ.
- ಆಂಗ್ಲರ ದಮನನೀತಿ: ಬ್ರಿಟಿಷರ ಕಾಲದ ಹಗಲುದರೋಡೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಹಾಗೂ ಭಾರತದ ಮೇಲೆ ನಡೆದ ಆರ್ಥಿಕ ಮತ್ತು ಸಾಂಸ್ಕೃತಿಕ ದಾಳಿಗಳ ಪರಾಮರ್ಶೆ.
- ರಾಜ್ಯಾಂಗದ ಹೆಜ್ಜೆಗಳು: ಸ್ವಾತಂತ್ರ್ಯಪೂರ್ವದ ಹೋರಾಟಗಳು, ೧೯೪೬ರ ನೌಕಾದಂಗೆ ಮತ್ತು ಭಾರತದ ಗಣತಂತ್ರ ಹಾಗೂ ರಾಜ್ಯಘಟಕಗಳ ವಿನ್ಯಾಸದ ವಿಶ್ಲೇಷಣೆ.





Reviews
There are no reviews yet.